ನಟ ಶಾಹೀದ್ ಕಪೂರ್ಗೆ ಈ ವರ್ಷದಲ್ಲಿ ದೊಡ್ಡ ಬ್ರೇಕ್ ತಂದುಕೊಟ್ಟಿದೆ ಕಬೀರ್ ಸಿಂಗ್. ಇದು ಟಾಲಿವುಡ್ನ ಅರ್ಜುನ್ ರೆಡ್ಡಿ ರಿಮೇಕ್ ಚಿತ್ರವಾಗಿದ್ದರೂ ಕೂಡ ಬಿಟೌನ್ ಮಂದಿಯ ಮನಸ್ಸು ಸೆಳೆಯುವಲ್ಲಿ ಸಕ್ಸಸ್ ಆಗಿದೆ.
ಕಬೀರ್ ಸಿಂಗ್ ಸಿನಿಮಾದಲ್ಲಿ ಶಾಹೀದ್ ಪಕ್ಕಾ ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಹುಡುಗಿಯಿಂದ ದೂರವಾದ ಬಳಿಕ ಬ್ಯಾಡ್ ಬಾಯ್ ಆಗಿ ಕಾಣಿಸಿಕೊಳ್ಳುವ ಶಾಹೀದ್ ಹದಿಹರೆಯದ ಹುಡುಗರಿಗೆ ತುಂಬಾ ಇಷ್ಟವಾಗುತ್ತಾರೆ. ಆಗಾಗ ಬರುವ ಕಿಸ್ ಸೀನ್ಗಳು ಚಿತ್ರಕ್ಕೆ ಮೈಲೇಜ್ ನೀಡಿದೆ. ಇಂತಹದೊಂದು ಪಾತ್ರ ಮಾಡಲು ಶಾಹೀದ್ಗೆ ಪ್ರೋತ್ಸಾಹಿಸಿದ್ದೇ ಅವರ ಪತ್ನಿ ಮೀರಾ ರಜಪೂತ್ ಅಂತೆ.
ಇತ್ತೀಚಿಗೆ ಮಾಧ್ಯಮಗಳ ಎದುರು ಈ ವಿಚಾರ ಹಂಚಿಕೊಂಡ ಶಾಹೀದ್, ನಾವಿಬ್ಬರೂ ಟಾಲಿವುಡ್ನ ಅರ್ಜುನ್ ರೆಡ್ಡಿ ಸಿನಿಮಾ ಒಟ್ಟಿಗೆ ನೋಡಿದ್ದೆವು . ಈ ಚಿತ್ರವನ್ನು ಮೀರಾ ತುಂಬಾ ಮೆಚ್ಚಿದಳು. ಅದರಲ್ಲೂ ವಿಜಯ್ ದೇವರಕೊಂಡ ಪಾತ್ರಕ್ಕೆ ಮಾರುಹೋದರು. ಅದಕ್ಕಾಗಿಯೇ ಬಾಲಿವುಡ್ಗೆ ರಿಮೇಕ್ ಆದ ಕಬೀರ್ ಸಿಂಗ್ ಚಿತ್ರದಲ್ಲಿ ನಟಿಸುವಂತೆ ನಂಗೆ ಪ್ರೋತ್ಸಾಹಿಸಿದರು ಎಂದು ಹೇಳಿಕೊಂಡಿದ್ದಾರೆ.