ಹೈದರಾಬಾದ್ : ಬಾಲಿವುಡ್ ನಟಿ ಸಾರಾ ಅಲಿ ಖಾನ್ ತಮ್ಮ ಮುಂಬರುವ ಚಿತ್ರ ಅತ್ರಂಗಿ ರೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರ ನಡುವೆಯೂ ಜಿಮ್ಗೆ ಹೋಗುವುದನ್ನು ತಪ್ಪಿಸಿಲ್ಲ. ಹೀಗೆ ಜಿಮ್ನಲ್ಲಿ ನಟಿ ಮೋಜು, ಮಸ್ತಿ ಮಾಡಿರುವ ವಿಡಿಯೋವನ್ನು ಜಿಮ್ ಟ್ರೈನರ್ ಹಂಚಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಜೊತೆ ಸಾರಾ ಅತ್ರಂಗಿ ರೇ ಚಿತ್ರದ ಪ್ರಚಾರಕ್ಕಾಗಿ ನವದೆಹಲಿಗೆ ತೆರಳಿದ್ದಾರೆ. ಇದನ್ನೆಲ್ಲ ಬದಿಗೊತ್ತಿ ನಿಜಾಮುದ್ದೀನ್ ದರ್ಗಾದಲ್ಲಿ ನಡೆದ ಕವಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಗಾಯಕರೊಂದಿಗೆ ತಾವು ಹಾಡಿ ಆನಂದಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಸಾರಾ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಇತ್ತ ಸಾರಾ ಫಿಟ್ನೆಸ್ ತರಬೇತುದಾರರಾದ ನಮ್ರತಾ ಪುರೋಹಿತ್ ವಿಡಿಯೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಸಾರಾ ಮತ್ತು ನಮ್ರತಾ ಜಿಮ್ನಲ್ಲಿ ಮೋಜು, ಮಸ್ತಿ ಮಾಡಿದ್ದಾರೆ. ಜೊತೆಗೆ ಇಬ್ಬರು ಅತ್ರಂಗಿ ರೇ ಸಿನಿಮಾದ ಚಕ್ಚಕ್ ಹಾಡಿಗೆ ವರ್ಕ್ಔಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅತ್ರಂಗಿ ರೇ ಸಿನಿಮಾ ಡಿಸೆಂಬರ್ 24ರಂದು ಡಿಸ್ನಿ ಹಾಗೂ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ. ವಿಕ್ಕಿ ಕೌಶಲ್ ಅವರೊಂದಿಗೆ ಹೆಸರಿಡದ ರೋಮ್-ಕಾಮ್ನ ಚಿತ್ರೀಕರಣದಲ್ಲಿ ಸಾರಾ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ವಿಕ್ಕಿ- ಕತ್ರಿನಾ ಜೋಡಿಗೆ ವಿಶ್ ಮಾಡಿದ ಸಲ್ಮಾನ್ ಖಾನ್ ಕುಟುಂಬ