ಇಂದು ದೇಶಾದ್ಯಂತ ಬಾಲಿವುಡ್ನ ಚಪಾಕ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನೊಂದು ವಿಶೇಷ ಅಂದ್ರೆ ಈ ಸಿನಿಮಾ ನೋಡಲು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಪಕ್ಷದ ಕಾರ್ಯಕರ್ತರಿಗೆ ಲಖನೌದಲ್ಲಿ ಥಿಯೇಟರ್ ಬುಕ್ ಮಾಡಿದ್ದಾರೆ. ಮತ್ತೊಂದೆಡೆ ನಾಳೆ ಪಂಜಾಬ್ನ ಜಿರಾಕ್ಪುರ್ನಲ್ಲಿ ಸಾಮಾಜಿಕ ಅಭಿವೃದ್ಧಿ ಕಲ್ಯಾಣ ಇಲಾಖೆ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ವಿಶೇಷ ಪ್ರದರ್ಶನವನ್ನು ಆಯೋಜಿಸಿದೆ.
-
Samajwadi Party: On the directive of party President Akhilesh Yadav ji, today party will organize a screening of the movie #Chhapaak for its workers. A cinema hall in Lucknow has been booked for this. pic.twitter.com/Tux2F1GfsZ
— ANI UP (@ANINewsUP) January 10, 2020 " class="align-text-top noRightClick twitterSection" data="
">Samajwadi Party: On the directive of party President Akhilesh Yadav ji, today party will organize a screening of the movie #Chhapaak for its workers. A cinema hall in Lucknow has been booked for this. pic.twitter.com/Tux2F1GfsZ
— ANI UP (@ANINewsUP) January 10, 2020Samajwadi Party: On the directive of party President Akhilesh Yadav ji, today party will organize a screening of the movie #Chhapaak for its workers. A cinema hall in Lucknow has been booked for this. pic.twitter.com/Tux2F1GfsZ
— ANI UP (@ANINewsUP) January 10, 2020
-
Punjab Government's department of social security and development of women & children to screen #Chhapaak movie for acid attack survivors, tomorrow in Zirakpur pic.twitter.com/VYeplwYCvG
— ANI (@ANI) January 10, 2020 " class="align-text-top noRightClick twitterSection" data="
">Punjab Government's department of social security and development of women & children to screen #Chhapaak movie for acid attack survivors, tomorrow in Zirakpur pic.twitter.com/VYeplwYCvG
— ANI (@ANI) January 10, 2020Punjab Government's department of social security and development of women & children to screen #Chhapaak movie for acid attack survivors, tomorrow in Zirakpur pic.twitter.com/VYeplwYCvG
— ANI (@ANI) January 10, 2020
ಇನ್ನು ಚಪಾಕ್ ಸಿನಿಮಾದಲ್ಲಿ ನಟಿಸಿರುವ ದೀಪಿಕಾ ಪಡುಕೋಣೆ ಇತ್ತೀಚೆಗೆ ಜೆಎನ್ಯು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದರು. ಇದರಿಂದ ಕೆರಳಿದ ಬಿಜೆಪಿ ಕಾರ್ಯಕರ್ತರು ಚಪಾಕ್ ಸಿನಿಮಾ ವೀಕ್ಷಿಸದಂತೆ ಕರೆ ನೀಡಿದ್ದರು. ಇದಾದ ಮೇಲೆ ಚಿತ್ರದ ಕಥಾ ನಾಯಕಿ ನನಗೆ ಈ ಸಿನಿಮಾದಿಂದ ಯಾವುದೇ ಕ್ರೆಡಿಟ್ ಸಿಕ್ಕಿಲ್ಲ ಅಂತ ಕೋರ್ಟ್ ಮೆಟ್ಟಿಲೇರಿದ್ದರು. ಹಾಗೂ ಸಿನಿಮಾದಲ್ಲಿ ಬಳಸಲಾಗಿರುವ ಬಶೀರ್ ಎಂಬ ಪದವನ್ನು ರಾಜೇಶ್ ಎಂದು ಬಳಸಲಾಗಿದೆ. ಇದರಿಂದ ಧರ್ಮಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಇಷ್ಟೆಲ್ಲ ಆರೋಪ, ಸವಾಲುಗಳನ್ನು ಎದುರಿಸಿರುವ ಚಪಾಕ್ ಸಿನಿಮಾ ಇಂದು ತೆರೆ ಕಂಡಿದೆ. ಚಿತ್ರಕ್ಕೆ ಮೇಘನಾ ಗುಲ್ಜಾರ್ ನಿರ್ದೇಶನವಿದ್ದು, ದೀಪಿಕಾ ಪಡುಕೋಣೆ ಮತ್ತು ಗುಲ್ಜಾರ್ ಬಂಡವಾಳ ಹೂಡಿದ್ದಾರೆ.