ETV Bharat / sitara

ಕತ್ರಿನಾ​, ವಿಕ್ಕಿ ಮದುವೆಗೆ ಸಲ್ಮಾನ್​ ಖಾನ್​​ 'ಟೈಗರ್​ ಬಾಡಿಗಾರ್ಡ್'​​ ಹೈ ಸೆಕ್ಯೂರಿಟಿ..!

ಬಾಲಿವುಡ್​ ಬ್ಯೂಟಿ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ರಾಜಸ್ಥಾನ ಸಿಕ್ಸ್ ಸೆನ್ಸಸ್​ ಫೋರ್ಟ್ ಬರ್ವಾರಾ ಸಿದ್ಧವಾಗಿದೆ. ಹೈಸೆಕ್ಯೂರಿಟಿ ಮಧ್ಯ ನಡೆಯಲಿರುವ ಮದುವೆಯಲ್ಲಿ ಸೆಲೆಬ್ರೆಟಿಗಳು, ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಆದ್ರೆ ಸಲ್ಮಾನ್​ ಖಾನ್​ಗೆ ವಿವಾಹ ಆಮಂತ್ರಣ ನಿಡದಿದ್ದರೂ ಅವರ ಬಾಡಿಗಾರ್ಡ್​​ ಕ್ಯಾಟ್​ ಮತ್ತು ವಿಕ್ಕಿ ವಿವಾಹಕ್ಕೆ ಭದ್ರತೆ ಒದಗಿಸಿದ್ದು, ಆಚ್ಚರಿಗೆ ಕಾರಣವಾಗಿದೆ.

katrina-vicky-wedding
ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್
author img

By

Published : Dec 6, 2021, 6:56 PM IST

ಹೈದರಾಬಾದ್: ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್​ ಫೋರ್ಟ್ ಬರ್ವಾರಾವನ್ನು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹಕ್ಕಾಗಿ ಸಂಪೂರ್ಣವಾಗಿ ಅಲಂಕರಿಸಲಾಗಿದೆ. ಅಲ್ಲದೆ, ಕೋಟೆಯ ಒಳಗೆ ಮತ್ತು ಹೊರಗೆ ಭದ್ರತಾ ವ್ಯವಸ್ಥೆ ಮಾಡಲಾಗುತ್ತಿದೆ.

ಮದುವೆಯ ದಿನ (ಡಿಸೆಂಬರ್ 9) ಕೋಟೆಗೆ ಬಿಗಿ ಭದ್ರತೆಯನ್ನು ಮಾಡಲಾಗುತ್ತದೆ. ಆ ದಿನ ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಕ್ಯಾಟ್​ ಮದುವೆಗೆ ಹೆಚ್ಚುವರಿ ಭದ್ರತೆಯನ್ನು ನೀಡಲಿದ್ದಾರೆ ಎನ್ನಲಾಗ್ತಿದೆ. ಡಿಸೆಂಬರ್ 9 ರಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಭದ್ರತೆಗೆ ಸಲ್ಮಾನ್ ಖಾನ್ ಅವರ ಅಂಗರಕ್ಷಕ ಶೇರಾ ಹೆಚ್ಚುವರಿ ಭದ್ರತೆ ಒದಗಿಸಲಿದ್ದಾರೆ. ಶೇರಾ ಸಹ ವರ್ಷಗಳಿಂದ ಸಲ್ಮಾನ್ ಖಾನ್​ಗೆ ಅಂಗರಕ್ಷನಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಶೇರಾ ಮತ್ತು ಕತ್ರಿನಾ ಬಾಂಧವ್ಯ ಕೂಡ ಚೆನ್ನಾಗಿದೆ ಎಂದು ಹೇಳಲಾಗ್ತಿದೆ.

ಶೇರಾ ಅವರು 'ಟೈಗರ್ ಸೆಕ್ಯೂರಿಟಿ ಸರ್ವೀಸ್' ಎಂಬ ಭದ್ರತಾ ಕಂಪನಿಯ ಮಾಲೀಕರಾಗಿದ್ದಾರೆ. ಕ್ಯಾಟ್​ ಮದುವೆಯ ದಿನದಂದು ಕೋಟೆಗೆ ಟೈಟ್​ ಸೆಕ್ಯೂರಿಟಿ ನಿಯೋಜಿಸಲಾಗುತ್ತದೆ. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಇದರೊಂದಿಗೆ ವಿಐಪಿ ಅತಿಥಿಗಳಿಗಾಗಿ ಸಂಚಾರ ಪೊಲೀಸರನ್ನೂ ನಿಯೋಜಿಸಲಾಗಿದೆ.

ಅಲ್ಲದೆ, ವಿಕ್ಕಿ ಕೌಶಲ್ ರಾಜಮನೆತನದ ಏಳು ಬಿಳಿ ಕುದುರೆಗಳ ರಥದಲ್ಲಿ ಮದುವೆ ಮನೆ ಪ್ರವೇಶಿಸಲಿದ್ದಾರೆ. ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ಭದ್ರತೆಯ ದೃಷ್ಟಿಯಿಂದ ಸಿಕ್ಸ್ ಸೆನ್ಸಸ್​ ಫೋರ್ಟ್‌ನಲ್ಲಿರುವ ಧರ್ಮಶಾಲಾವನ್ನು ಬುಕ್ ಮಾಡಲಾಗಿದೆ.

ಅದೇ ಸಮಯದಲ್ಲಿ, ಮುಂಬೈ ಮೂಲದ ಈವೆಂಟ್ ಕಂಪನಿಯು ಮಾತಾ ಟ್ರಸ್ಟ್ ಧರ್ಮಶಾಲಾದಲ್ಲಿ 150 ಅತಿಥಿಗಳಿಗಾಗಿ 27 ಕೊಠಡಿಗಳು ಮತ್ತು ಐದು ಸಭಾಂಗಣಗಳನ್ನು ಕಾಯ್ದಿರಿಸಿದೆ. ಚೌತ್ ಮೀನಾ ಮಾತಾ ಕಾಂಪ್ಲೆಕ್ಸ್‌ನಲ್ಲಿ ಅತಿಥಿಗಳಿಗಾಗಿ 30 ಕೊಠಡಿಗಳು ಮತ್ತು ಅಡಿಗೆ ಸೇರಿದಂತೆ ಐದು ಹಾಲ್‌ಗಳನ್ನು ಸಹ ಕಾಯ್ದಿರಿಸಲಾಗಿದೆ. ಇದಲ್ಲದೇ, ರಣಥಂಬೋರ್‌ನಲ್ಲಿರುವ ತಾಜ್ ಮತ್ತು ಇತರ ರೆಸಾರ್ಟ್‌ಗಳು ಅತಿಥಿಗಳು ತಂಗಲು ಸಹ ವ್ಯವಸ್ಥೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.