ETV Bharat / sitara

ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವ ಸಲ್ಮಾನ್ ಖಾನ್ - ಅಭಿಷೇಕ್ ಬಚ್ಚನ್ - ಐಶ್ವರ್ಯಾ ರೈ ಬಚ್ಚನ್​​

ನಟ ಸಲ್ಮಾನ್ ಖಾನ್ ಹಾಗೂ ಅಭಿಷೇಕ್ ಬಚ್ಚನ್​ ಹಿಂದಿಯ 'ಸರಿಗಮಪ' ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಲ್ಮಾನ್ ಖಾನ್ - ಅಭಿಷೇಕ್ ಬಚ್ಚನ್
ಸಲ್ಮಾನ್ ಖಾನ್ - ಅಭಿಷೇಕ್ ಬಚ್ಚನ್
author img

By

Published : Nov 23, 2021, 8:04 AM IST

ಮುಂಬೈ: ಬಾಲಿವುಡ್​ ಸ್ಟಾರ್​ಗಳಾದ ಸಲ್ಮಾನ್ ಖಾನ್ ಹಾಗೂ ಅಭಿಷೇಕ್ ಬಚ್ಚನ್​ ವೈಯಕ್ತಿಕ ಕಾರಣಗಳಿಂದ ತೆರೆ ಮೇಲೆ ಹಾಗೂ ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಇದೀಗ ಇವರಿಬ್ಬರು ಝೀ ಟಿವಿಯಲ್ಲಿ ಪ್ರಸಾರವಾಗುವ ಹಿಂದಿಯ 'ಸರಿಗಮಪ' ರಿಯಾಲಿಟಿ ಶೋನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ (Salman Khan, Abhishek Bachchan to appear as special guests on 'Sa Re Ga Ma Pa').

ಹೌದು..,ಈ ಇಬ್ಬರೂ ನಟರು ತಮ್ಮ ಸಿನಿಮಾಗಳ ಪ್ರಮೋಷನ್​ಗಾಗಿ 'ಸರಿಗಮಪ' ಕಾರ್ಯಕ್ರಮದ ವಾರಾಂತ್ಯದ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಅವರು ತಮ್ಮ 'ಆಂಟಿಮ್: ದಿ ಫೈನಲ್ ಟ್ರುತ್' ಚಿತ್ರದ ಪ್ರಚಾರಕ್ಕಾಗಿ ಸಹ - ನಟರಾದ ಆಯುಷ್ ಶರ್ಮಾ ಮತ್ತು ಮಹಿಮಾ ಮಕ್ವಾನಾ ಜೊತೆ ಬರಲಿದ್ದು, ಅಭಿಷೇಕ್ ಬಚ್ಚನ್ ಅವರು ತಮ್ಮ ಕ್ರೈಮ್ ಥ್ರಿಲ್ಲರ್ ಚಿತ್ರ 'ಬಾಬ್ ಬಿಸ್ವಾಸ್' ಪ್ರಚಾರ ಮಾಡಲು ಶೋನಲ್ಲಿ ಸೆಲೆಬ್ರಿಟಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಇನ್​​ಸ್ಟಾಗ್ರಾಂನಲ್ಲಿ ಪತಿ ಜೋನಾಸ್​ ಹೆಸರು ಕೈಬಿಟ್ಟ ಪ್ರಿಯಾಂಕಾ: ದಾಂಪತ್ಯದಲ್ಲಿ ಬಿರುಕು?

ಸಲ್ಮಾನ್ ಖಾನ್ ಹಾಗೂ ಅಭಿಷೇಕ್ ಬಚ್ಚನ್​ ಶೋನಲ್ಲಿ ಸಿನಿಮಾ ಪ್ರಚಾರದ ಜೊತೆಗೆ ವೈಯಕ್ತಿಕ ಜೀವನದ ಕೆಲವು ಮಾಹಿತಿ ಹಂಚಿಕೊಳ್ಳಲಿದ್ದಾರೆ ಹಾಗೂ ತಮ್ಮ ಸಿನಿಮಾಗಳ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಭಿಷೇಕ್​ರ ಪತ್ನಿ, ನಟಿ ಐಶ್ವರ್ಯಾ ರೈ ಬಚ್ಚನ್​​ರ ಮಾಜಿ ಬಾಯ್​ಫ್ರೆಂಡ್​ ಸಲ್ಮಾನ್ ಖಾನ್ ಖಾನ್ ಆಗಿರುವ ಕಾರಣ ಇಬ್ಬರೂ ನಟರು ತೆರೆ ಮೇಲಾಗಲಿ, ವೇದಿಕೆ ಮೇಲಾಗಲಿ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಹಾಗಾಗಿ ಈ ಬಾರಿಯ ಸರಿಗಮಪ ಶೋ ಭಾರಿ ಪ್ರಾಮುಖ್ಯತೆ ಪಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.