ETV Bharat / sitara

ಸಿಬ್ಬಂದಿಗೆ ಕೊರೊನಾ ಪಾಸಿಟಿವ್​; ಸ್ವತಃ ಕ್ವಾರಂಟೈನ್ ಆದ ನಟ ಸಲ್ಮಾನ್ ಖಾನ್​​

ತಮ್ಮ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಬಂದಿದ್ದರಿಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸ್ವತಃ 14 ದಿನಗಳ ಕಾಲ ಐಸೋಲೇಷನ್​ನಲ್ಲಿರಲು ನಿರ್ಧರಿಸಿದ್ದಾರೆ.

Salman & family in isolation as staff test Covid positive: Reports
ಬಾಲಿವುಡ್ ನಟ ಸಲ್ಮಾನ್ ಖಾನ್
author img

By

Published : Nov 19, 2020, 3:57 PM IST

ಮುಂಬೈ: ತಮ್ಮ ಕಾರು ಚಾಲಕ ಹಾಗೂ ಇತರ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದ್ದರಿಂದ ಬಾಲಿವುಡ್​ ನಟ ಸಲ್ಮಾನ್ ಖಾನ್ ಸ್ವತಃ ಹೋಂ ಕ್ವಾರಂಟೈನ್ ಆಗಿದ್ದಾರೆ.

ಕೋವಿಡ್​ ಪರೀಕ್ಷೆಯಲ್ಲಿ ಸಲ್ಲು ಚಾಲಕ ಹಾಗೂ ಇತರೆ ಸಿಬ್ಬಂದಿಗೆ ಪಾಸಿಟಿವ್​ ಕಾಣಿಸಿಕೊಂಡಿದ್ದರಿಂದ ಅವರು​ ಬಾಂಬೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಮುಂಜಾಗ್ರತಾ ಕ್ರಮವಾಗಿ ಸಲ್ಮಾನ್ ಖಾನ್ ಮನೆಯಲ್ಲಿಯೇ ಕ್ವಾರಂಟೈನ್​ಗೆ ಒಗಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಲ್ಮಾನ್ ಖಾನ್ ಅವರ ಕುಟುಂಬ ಸದಸ್ಯರೂ ಕೂಡ ಮನೆಯಲ್ಲಿಯೇ 14 ದಿನಗಳ ಕಾಲ ಐಸೋಲೇಷನ್​ನಲ್ಲಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರಭುದೇವ್​ ನಿರ್ದೇಶನದ ರಾಧೆ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆಗೊಳ್ಳಲಿದೆ ಎನ್ನಲಾಗುತ್ತಿದೆ. ಇದಲ್ಲದೇ ಸಲ್ಲು ಭಾಯ್ ಕಿಕ್ 2 ಮತ್ತು ಕಭಿ ಈದ್ ಕಭಿ ದೀಪಾವಳಿ ಚಿತ್ರಕ್ಕೂ ತಯಾರಿ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.