ನವದೆಹಲಿ: ಇರ್ಫಾನ್ ಖಾನ್ ವಿಡಿಯೋ ಕಾಲ್ ಮಾಡಲು ಪ್ರಯಾಸಪಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರ ಪುತ್ರ ಬಾಬಿಲ್ ಖಾನ್ ತಮ್ಮ ತಂದೆಯ 54ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡಿದ್ದಾರೆ.
ಇರ್ಫಾನ್, ಅವರ ಪತ್ನಿ ಸುತಪಾ ಮತ್ತು ಅವರ ಕಿರಿಯ ಮಗ ಅಯಾನ್ ಅವರು ಬಾಬಿಲ್ಗೆ ವಿಡಿಯೋ ಕಾಲ್ ಮಾಡಲು ಪ್ರಯತ್ನಿಸುತ್ತಿರುವ ಹಳೆಯ ಫ್ಯಾಮಿಲಿ ವಿಡಿಯೋವನ್ನು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಹುಟ್ಟುಹಬ್ಬದ ಆಚರಣೆಗಳಲ್ಲಿ ತಂದೆ ಭಾಗಿಯಾಗುತ್ತಿರಲಿಲ್ಲ ಎಂಬುದನ್ನು ನೆನಪಿಸಿಕೊಂಡಿರುವ ಬಾಬಿಲ್ ತಂದೆಯ ಜನ್ಮದಿನದಂದು ಭಾವನಾತ್ಮಕ ಶೀರ್ಷಿಕೆ ಬರೆದಿದ್ದಾರೆ.