ಬಾಲಿವುಡ್ ನಟಿ ಕಂಗನಾ ರಣಾವತ್ ಅನೇಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಂಗನಾ ಅಭಿನಯದ 'ತಲೈವಿ' ಬಿಡುಗಡೆಗಾಗಿ ಕಾದಿದೆ. ಈ ನಡುವೆ ಅವರ ಮತ್ತೊಂದು ಸಿನಿಮಾ 'ಧಾಕಡ್' ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಇದು ಭಾರತೀಯ ಚಿತ್ರರಂಗದ ಮೊದಲ ಹೈ ಆ್ಯಕ್ಷನ್ ಸ್ಪೈ ಥ್ರಿಲ್ಲರ್ ಸಿನಿಮಾ ಎಂದು ಚಿತ್ರತಂಡ ಹೇಳಿದೆ.
ಅಂದಹಾಗೆ ಧಾಕಡ್ ಸಿನಿಮಾ ಇದೇ ವರ್ಷ ಅಕ್ಟೋಬರ್ 1 ರಂದು ಬಿಡುಗಡೆಯಾಗಲು ದಿನಾಂಕ ನಿಗದಿಯಾಗಿದೆ. ಸೋಹಮ್ ರಾಕ್ಸ್ಟಾರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ತಯಾರಾಗುತ್ತಿರುವ ಈ ಚಿತ್ರವನ್ನು ರಜನೀಶ್ ಘಾಯ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಕಂಗನಾ ಲುಕ್ ರಿವೀಲ್ ಆಗಿದ್ದು ಸಿನಿಮಾ ಭಾರೀ ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಕಂಗನಾ ರಣಾವತ್ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪೋಸ್ಟರನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಂಗನಾ, "ನನ್ನ ದಾರಿಗೆ ಅಡ್ಡ ಬರುವ ಯಾರನ್ನಾದರೂ ನಾನು ಎದುರಿಸಲು ಸಿದ್ಧಳಿದ್ದೇನೆ, ಧಾಕಡ್ ಭಾರತದ ಮೊದಲ ಮಹಿಳಾ ಪಾತ್ರದಲ್ಲಿ ಬರುತ್ತಿರುವ ಹೈ ಆ್ಯಕ್ಷನ್ ಸ್ಪೈ ಥ್ರಿಲ್ಲರ್ ಸಿನಿಮಾ, ಈ ಸಿನಿಮಾ ಭಾರತೀಯ ಚಿತ್ರರಂಗದ ಹೊಸತನಕ್ಕೆ ನಾಂದಿಯಾಗುತ್ತದೆ ಎಂದು ನಂಬಿದ್ದೇನೆ" ಎಂದು ಬರೆದುಕೊಂಡಿದ್ದಾರೆ.
-
She is fearless and Fiery! She is Agent Agni 🔥
— Kangana Ranaut (@KanganaTeam) January 18, 2021 " class="align-text-top noRightClick twitterSection" data="
India’s first female led action thriller, #Dhaakad releasing in theatres on 1st October 2021!@SohamRockstrEnt @DeepakMukut @RazyGhai @sohelmaklai @sohailmaklai @AsylumFilms @rampalarjun @divyadutta25 @writish @DhaakadTheMovie pic.twitter.com/M4jmflfoV5
">She is fearless and Fiery! She is Agent Agni 🔥
— Kangana Ranaut (@KanganaTeam) January 18, 2021
India’s first female led action thriller, #Dhaakad releasing in theatres on 1st October 2021!@SohamRockstrEnt @DeepakMukut @RazyGhai @sohelmaklai @sohailmaklai @AsylumFilms @rampalarjun @divyadutta25 @writish @DhaakadTheMovie pic.twitter.com/M4jmflfoV5She is fearless and Fiery! She is Agent Agni 🔥
— Kangana Ranaut (@KanganaTeam) January 18, 2021
India’s first female led action thriller, #Dhaakad releasing in theatres on 1st October 2021!@SohamRockstrEnt @DeepakMukut @RazyGhai @sohelmaklai @sohailmaklai @AsylumFilms @rampalarjun @divyadutta25 @writish @DhaakadTheMovie pic.twitter.com/M4jmflfoV5
ಇದನ್ನೂ ಓದಿ: ನಿಗದಿಪಡಿಸಿದ ದಿನಾಂಕಕ್ಕೆ ಮುನ್ನವೇ 'ಪೊಗರು' ಬಿಡುಗಡೆಗೆ ನಿರ್ಧಾರ..!
ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ರಜನೀಶ್, "ಈ ಧಾಕಡ್ ನನಗೆ ಬಹಳ ಇಷ್ಟವಾದ ಸಿನಿಮಾ. ಬಾಲಿವುಡ್ನಲ್ಲಿ ಇದುವರೆಗೂ ಅನೇಕ ಆ್ಯಕ್ಷನ್ ಸಿನಿಮಾಗಳು ತಯಾರಾಗಿವೆ. ಆದರೆ ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾ ಬಂದಿಲ್ಲ. ಈ ಸಿನಿಮಾ ಹೊಸತನಕ್ಕೆ ನಾಂದಿಯಾಗುವುದು ಖಂಡಿತ. ಚಿತ್ರದಲ್ಲಿ ಅರ್ಜುನ್ ರಾಮ್ಪಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದಿವ್ಯದತ್ತಾ ಕೂಡಾ ಇದ್ದಾರೆ. ಹಾಲಿವುಡ್ ಆ್ಯಕ್ಷನ್ ಸಿನಿಮಾಗಳಿಗೆ ಕೆಲಸ ಮಾಡಿದ ತಂತ್ರಜ್ಞರು ನಮ್ಮ ಸಿನಿಮಾದಲ್ಲಿ ಇರುವುದು ಚಿತ್ರದ ಪ್ಲಸ್ ಪಾಯಿಂಟ್" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.