ETV Bharat / sitara

ಘರ್ಜಿಸಲು ಸಿದ್ಧರಾದ ವಿದ್ಯಾ ಬಾಲನ್.. ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ 'ಶೇರ್ನಿ' ಚಿತ್ರ - ವಿದ್ಯಾ ಬಾಲನ್ ಅಭಿನಯದ 'ಶೇರ್ನಿ' ಚಿತ್ರ

ವಿದ್ಯಾ ಬಾಲನ್ ಮುಂಬರುವ ಚಿತ್ರ 'ಶೇರ್ನಿ' ಡಿಜಿಟಲ್ ಬಿಡುಗಡೆಗೆ ಸಜ್ಜಾಗಿದೆ. ಶಕುಂತಲಾ ದೇವಿ ನಂತರ, ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ವಿದ್ಯಾ ಬಾಲನ್ ಅಭಿನಯದ ಎರಡನೇ ಚಿತ್ರ ಇದಾಗಿದೆ..

Ready to roar! Vidya Balan's Sherni to strike on OTT, new poster out

author img

By

Published : May 17, 2021, 5:01 PM IST

ಹೈದರಾಬಾದ್ : ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ 'ಶೇರ್ನಿ' ಚಿತ್ರ ಒಟಿಟಿ ಬಿಡುಗಡೆಗೆ ಸಿದ್ಧವಾಗಿದೆ. ಈ ವರ್ಷದ ಜೂನ್‌ನಲ್ಲಿ ಚಿತ್ರ ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಪ್ರಕಟಿಸಿದೆ.

ಚಿತ್ರತಂಡ ಹೊಸ ಪೋಸ್ಟರ್‌ ಹಂಚಿಕೊಂಡಿದ್ದು, ಬಿಡುಗಡೆಯ ದಿನಾಂಕವನ್ನು ಇನ್ನಷ್ಟೇ ತಿಳಿಸಬೇಕಿದೆ. ಭೂಷಣ್ ಕುಮಾರ್ ಅವರ ಟಿ-ಸೀರಿಸ್ ಮತ್ತು ವಿಕ್ರಮ್ ಮಲ್ಹೋತ್ರಾ ಅವರ ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಸಹ-ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ಅಮಿತ್ ಮಸೂರ್ಕರ್ ನಿರ್ದೇಶಿಸಿದ್ದಾರೆ.

'ಶೇರ್ನಿ'ಯ ಒಟಿಟಿ ಬಿಡುಗಡೆಯನ್ನು ಪ್ರಕಟಿಸಿದ ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಈ ಚಿತ್ರದ ಹೊಸ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, "ಘರ್ಜಿಸಲು ಸಿದ್ಧವಾಗಿದೆ! ನಮ್ಮ ಹೊಸ ಚಿತ್ರ 'ಶೇರ್ನಿ' ಈ ಜೂನ್‌ನಲ್ಲಿ ಪ್ರೈಮ್‌ವಿಡಿಯೋದಲ್ಲಿ ಪ್ರಥಮವಾಗಿ ಪ್ರದರ್ಶನಗೊಳ್ಳಲಿದೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ." ಎಂದು ಬರೆಯಲಾಗಿದೆ.

ಮಾನವ-ಪ್ರಾಣಿ ಸಂಘರ್ಷವನ್ನು ಈ ಪರಿಶೋಧಿಸುವ ಚಿತ್ರದಲ್ಲಿ ವಿದ್ಯಾ ಬಾಲನ್ ಅರಣ್ಯಾಧಿಕಾರಿಯಾಗಿ ನಟಿಸಿದ್ದಾರೆ. 2020ರಲ್ಲಿ ವಿದ್ಯಾ ಬಾಲನ್ ಅಭಿನಯದ 'ಶಕುಂತಲಾ ದೇವಿ' ಚಿತ್ರ ಕೂಡಾ ಅಮೆಜಾನ್ ಪ್ರೈಮ್​ನಲ್ಲಿ ಒಟಿಟಿ ಬಿಡುಗಡೆಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.