ಲಾಕ್ ಡೌನ್ ಸಮಯದಲ್ಲಿ ಸೆಲಬ್ರಿಟಿ ಹಿರೋಯಿನ್ಗಳು ತಮ್ಮ ಪತಿ ದೇವರಿಗೆ ಹೇರ್ ಕಟ್ ಮಾಡುತ್ತಿರುವ ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಈಗ ಬಾಲಿವುಡ್ ನಟ ರಣ್ವೀರ್ ಸಿಂಗ್ಗೆ ಪತ್ನಿ ದೀಪಿಕಾ ಪಡುಕೋಣೆ ಹೇರ್ಸ್ಟೈಲ್ ಮಾಡಿರುವ ಫೋಟೋವನ್ನು ರಣ್ವೀರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ.
- View this post on Instagram
Hair by: @deepikapadukone Very Mifune in ‘Yojimbo’. I like it. What do you think?
">
ಪೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರಣ್ವೀರ್, ಹೇರ್ಸ್ಟೈಲ್ ಬೈ ದೀಪಿಕಾ ಪಡುಕೋಣೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಹೇರ್ಸ್ಟೈಲ್ ಜಪಾನಿ ನಟ ತೊಷಿರೋ ಮಿಫುನಿ 1961 ರಲ್ಲಿ ಬಿಡುಗಡೆಯಾದ ಯೊಜಿಂಬೊ ಚಿತ್ರದ ಹೇರ್ಸ್ಟೈಲ್ನಂತೆ ಕಾಣುತ್ತದೆ. ಈ ಕೇಶವಿನ್ಯಾಸ ನನಗೆ ಬಹಳ ಇಷ್ಟವಾಯ್ತು..ನಿಮಗೆ ಏನು ಅನ್ನಿಸ್ತಿದೆ...? ಎಂದು ರಣ್ವೀರ್ ತಮ್ಮ ಅಭಿಮಾನಿಗಳನ್ನು ಪ್ರಶ್ನಿಸಿದ್ದಾರೆ.
ಈ ಪೋಟೋ ಪೋಸ್ಟ್ ಮಾಡಿ ಒಂದು ಗಂಟೆ ಅವಧಿಯಲ್ಲೇ ಅಭಿಮಾನಿಗಳು 1.3 ಮಿಲಿಯನ್ ಲೈಕ್ಸ್ ಒತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಮಿಜಾನ್ ಜಫ್ರಿ, ಜಿಮ್ ಸರ್ಬ್ , ಮಾನ್ವಿ ಘಾಗ್ರೊ ನಂತ ಸೆಲಬ್ರಿಟಿಗಳು ಕೂಡಾ ರಣ್ವೀರ್ ಫೋಟೋಗೆ ಕಮೆಂಟ್ ಮಾಡಿದ್ದಾರೆ. ಲಾಕ್ ಡೌನ್ನಿಂದ ಶೂಟಿಂಗ್ ಇರದೆ ಮನೆಯಲ್ಲೇ ಇರುವ ರಣ್ವೀರ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದು ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.