ಸಮುದ್ರದ ತಟದಲ್ಲಿ 'ತನಹ...ತನಹ' ಎಂದು ತುಂಡುಡುಗೆಯಲ್ಲಿ ಊರ್ಮಿಳಾ ಮಾತೊಂಡ್ಕರ್ ಕುಣಿದ ಹಾಡು ಯಾರಿಗೆ ತಾನೇ ನೆನಪಿಲ್ಲ...? 'ರಂಗೀಲಾ' ಚಿತ್ರದ ಬಹುತೇಕ ಎಲ್ಲಾ ಹಾಡುಗಳು ಇಂದಿಗೂ ಸಖತ್ ಫೇಮಸ್. 1995 ರಲ್ಲಿ ಬಿಡುಗಡೆಯಾದ 'ರಂಗೀಲಾ' ಚಿತ್ರಕ್ಕೆ ಈಗ 25 ವರ್ಷಗಳ ಸಂಭ್ರಮ.
ತಂದೆ, ತಾಯಿ, ತಮ್ಮನೊಂದಿಗೆ ಪುಟ್ಟ ಮನೆಯಲ್ಲಿ ವಾಸಿಸುವ ಹುಡುಗಿಯ ದೊಡ್ಡ ದೊಡ್ಡ ಕನಸುಗಳು, ಆ ಕನಸು ನನಸಾದಾಗ ಆಕೆ ನನ್ನಿಂದ ದೂರವಾಗುತ್ತಿದ್ದಾಳೆ ಎಂದು ಬೇಸರ ವ್ಯಕ್ತಪಡಿಸುವ ನಾಯಕ, ಸಿನಿಮಾ ನಟನ ಪ್ರೀತಿಯನ್ನು ನಿರಾಕರಿಸಿ ತನಗಾಗಿ ಕಷ್ಟ ಪಟ್ಟ ನಾಯಕನನ್ನು ಹುಡುಕಿ ಬರುವ ನಾಯಕಿ..ಇದೆಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗಿದೆ.
ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ 46 ವರ್ಷದ ನಟಿ ಊರ್ಮಿಳಾ ಮಾತೊಂಡ್ಕರ್ 'ಚಲ್ ಮೆರಿ ಸಂಗ್ ಸಂಗ್, ಲೇಲೆ ದುನಿಯಾ ಕಿ ರಂಗ್..ಹೋ ಜಾ ರಂಗೀಲಾ ರೆ'..ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಸಿನಿಮಾ 25 ವರ್ಷಗಳು ಪೂರೈಸಿದ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಚಿತ್ರದ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾವನ್ನು ಪ್ರೋತ್ಸಾಹಿಸಿದ್ದಕ್ಕೆ ಹಾಗೂ ತಮ್ಮನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಕ್ಕೆ ಅಭಿಮಾನಿಗಳಿಗೆ ಊರ್ಮಿಳಾ ಧನ್ಯವಾದ ಅರ್ಪಿಸಿದ್ದಾರೆ.
- " class="align-text-top noRightClick twitterSection" data="
">
ಚಿತ್ರವನ್ನು ರಾಮ್ಗೋಪಾಲ್ ವರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಊರ್ಮಿಳಾ ಜೊತೆಗೆ ಚಿತ್ರದಲ್ಲಿ ಆಮೀರ್ ಖಾನ್, ಜಾಕಿ ಶ್ರಾಫ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.