ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ಬಾಲಿವುಡ್ ನಟ, ನಿರ್ಮಾಪಕ ಜಾಕಿ ಭಗ್ನಾನಿ ಪ್ರೇಮ ಕಹಾನಿ ರಹಸ್ಯವಾಗೇನೂ ಉಳಿದಿಲ್ಲ. ಈ ಹಿಂದೆ ಜಾಕಿ ಭಗ್ನಾನಿ ಜೊತೆ ಡೇಟಿಂಗ್ನಲ್ಲಿರುವ ವಿಚಾರವನ್ನು ಹೇಳಿಕೊಂಡಿದ್ದ ರಕುಲ್, ಇಂದು ತಮ್ಮ ಪ್ರಿಯತಮನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.
"ಹ್ಯಾಪಿ ಹ್ಯಾಪಿ ಬರ್ತ್ಡೇ ಮೈ ಸನ್‌ಶೈನ್.. ಸದಾ ನಗುತ್ತಾ, ನಿನ್ನದೇ ರೀತಿಯಲ್ಲಿ ನಗುವನ್ನು ಹರಡುತ್ತಿರು. ನೀನು ಬಯಸಿದ ಎಲ್ಲವೂ ಸಿಗಲೆಂದು ನಾನು ಬಯಸುತ್ತೇನೆ ಎಂಬುದು ನಿನಗೆ ತಿಳಿದೇ ಇದೆ" ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಕುಲ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ಅಕ್ಟೋಬರ್ 31ರಂದು ತಮ್ಮ ಜನ್ಮದಿನದಂದು ಜಾಕಿ ಭಗ್ನಾನಿ ಜೊತೆ ಕೈ ಹಿಡಿದು ನಡೆಯುತ್ತಿರುವ ಫೋಟೋವೊಂದನ್ನು ಶೇರ್ ಮಾಡಿ, 'ಈ ವರ್ಷದ ಅತಿ ದೊಡ್ಡ ಉಡುಗೊರೆ' ಎಂದು ಬರೆದುಕೊಂಡಿದ್ದರು. ಸದ್ಯ ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ತಮ್ಮ ಮುಂಬರುವ ಹೆಸರಿಡದ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.