ಹೈದರಾಬಾದ್ : ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಮುಂದಿನ ಸಿನಿಮಾ 'ರಾಧೆ:ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಬಹುನಿರೀಕ್ಷಿತ ಟೈಟಲ್ ಸಾಂಗ್ ಬಿಡುಗಡೆಯಾಗಿದೆ.
ಈ ಹಾಡು ಸಂಪೂರ್ಣವಾಗಿ 'ಸಲ್ಮಾನ್ ಖಾನ್ ಬಗ್ಗೆಯೇ ಇದೆ' ಎಂದು ಭಾವಿಸುವ ಅವರ ಫ್ಯಾನ್ಗಳು ಸದ್ಯ ಈ ಹಾಡಿಗೆ ಫಿದಾ ಆಗಿದ್ದಾರೆ. ಸೀಟಿ ಮಾರ್ ಮತ್ತು ದೇ ದೇ ಪ್ಯಾರ್ ದೇ ನಂತರ, ಇತ್ತೀಚೆಗೆ ಈ ಸಾಂಗ್ ಬಿಡುಗಡೆಯಾಗಿದ್ದು, 55 ವರ್ಷದ ಸಲ್ಮಾನ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಈ ಸಾಂಗ್ ಶೇರ್ ಮಾಡಿದ್ದಾರೆ.
- " class="align-text-top noRightClick twitterSection" data="">
"ಇದು ಕೂಡ ಕಳೆದುಹೋಗುತ್ತದೆ ಮತ್ತು ಎಲ್ಲಾ ಮಾನವವರನ್ನು ಬೆಂಬಲಿಸಲು ದೇವರಿದ್ದಾರೆ, ದ್ವೇಷವನ್ನು ನಿರ್ಮೂಲನೆ ಮಾಡಿ. ರಾಧೆ ರಾಧೆ ರಾಧೆ ... # ಸ್ಟೇ ಸೇಫ್" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ರಾಧೆಯ ಟೈಟಕ್ ಟ್ರ್ಯಾಕ್‌ನ ಸಂಗೀತ ನಿರ್ದೇಶಕ ಸಾಜಿದ್ ವಾಜಿದ್ ಸಂಯೋಜಿಸಿದ್ದಾರೆ. ಈ ರಾಧೆ ಹಾಡು ಕಳೆದ ವರ್ಷ ಜೂನ್‌ನಲ್ಲಿ ಸಹೋದರ ವಾಜಿದ್ ಖಾನ್ ನಿಧನರಾದ ನಂತರ ಸಿಂಗಲ್ ಆಗಿ ಸಂಯೋಜಿಸಿರುವ ಸಾಜಿದ್ ಅವರ ಮೊದಲ ಹಾಡು. ಇನ್ನು, ರಾಧೆಯ ಟೈಟಲ್ ಟ್ರ್ಯಾಕ್ ಬಿಡುಗಡೆ ನಂತರ ಸಲ್ಲೂ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.