ETV Bharat / sitara

ಭಾರತೀಯ ಸಂಪ್ರದಾಯದಂತೆ ಹೊಸ ಮನೆ ಗೃಹ ಪ್ರವೇಶ ಮಾಡಿದ ಪಿಗ್ಗಿ-ಜೋನ್ಸ್​..ಫೋಟೋ ವೈರಲ್

author img

By

Published : Feb 13, 2021, 12:10 PM IST

ಕಳೆದ ವರ್ಷ ಲಾಕ್​ಡೌನ್​ನಲ್ಲಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನ್ಸ್ ಭಾರತೀಯ ಸಂಪ್ರದಾಯದಂತೆ ಹೊಸ ಮನೆ ಗೃಹಪ್ರವೇಶ ಮಾಡಿದ್ದಾರೆ. ಪ್ರಿಯಾಂಕಾ ಆಟೋಬಯೋಗ್ರಫಿ 'ಅನ್​​ಫಿನಿಷ್ಡ್​'ನಲ್ಲಿರುವ ಈ ಫೋಟೋ ಈಗ ವೈರಲ್ ಆಗುತ್ತಿದೆ.

Priyanka Chopra
ಪ್ರಿಯಾಂಕಾ ಛೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ 2018 ಡಿಸೆಂಬರ್ 2 ರಂದು ನಿಕ್ ಜೋನ್ಸ್ ಅವರನ್ನು ಮದುವೆಯಾದಾಗಿನಿಂದ ಅಮೆರಿಕದ ಲಾಸ್ ಏಂಜಲೀಸ್​​ನಲ್ಲಿ ನೆಲೆಸಿದ್ದಾರೆ. ಹಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಪ್ರಿಯಾಂಕಾ ಛೋಪ್ರಾ 'ಅನ್​​ಫಿನಿಷ್ಡ್​' ಎಂಬ ಆಟೋಬಯೋಗ್ರಫಿ ಬರೆದಿರುವುದು ತಿಳಿದ ವಿಚಾರ.

Priyanka Chopra
ಪ್ರಿಯಾಂಕಾ ಜೋನ್ಸ್ ಮನೆ ಗೃಹ ಪ್ರವೇಶ

ಲಾಕ್​ಡೌನ್ ಸಮಯದಲ್ಲಿ ತಾವು ಹೊಸ ಮನೆ ಗೃಹ ಪ್ರವೇಶ ಮಾಡಿದ ವಿಚಾರವನ್ನು ಪ್ರಿಯಾಂಕಾ ತಮ್ಮ ಆಟೋಬಯೋಗ್ರಫಿಯಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋವನ್ನು ಕೂಡಾ ಸೇರಿಸಿದ್ದಾರೆ. ಫ್ಯಾಷನ್ ಡಿಸೈನರ್ ಮಸಾಬಾ ಗುಪ್ತಾ ತಯಾರಿಸಿರುವ ಹೊಸ ಡಿಸೈನ್ ಔಟ್ ಫಿಟ್ ಧರಿಸಿರುವ ಪ್ರಿಯಾಂಕಾ ಛೋಪ್ರಾ. ದುಪ್ಪಟ್ಟ ಹೊದ್ದು, ತಲೆ ಮೇಲೆ ಕಳಸ ಹಿಡಿದು ಹೊಸ ಮನೆ ಪ್ರವೇಶಿಸಿದ್ದಾರೆ. ಪ್ರಿಯಾಂಕ ಹಿಂದೆಯೇ ನಿಕ್ ಜೋನ್ಸ್ ಕೂಡಾ ತಟ್ಟೆಯೊಂದರಲ್ಲಿ ಏನೋ ಹಿಡಿದು ಮನೆ ಪ್ರವೇಶಿಸುತ್ತಿರುವ ಫೋಟೋವನ್ನು ಮಸಬಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹೊಸ ಮನೆಯ ಬೆಲೆ ಸುಮಾರು 144 ಕೋಟಿ ರೂಪಾಯಿ ಎನ್ನಲಾಗಿದೆ. ಈ ಫೋಟೋ ಈಗ ವೈರಲ್ ಆಗುತ್ತಿದೆ. ಪ್ರಿಯಾಂಕಾ ಛೋಪ್ರಾ ತಾವು ಬಾಲ್ಯದಿಂದ ಇದುವರೆಗೂ ಅನುಭವಿಸಿದ ನೋವುಗಳನ್ನು 'ಅನ್​​ಫಿನಿಷ್ಡ್​' ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಓದಿದವರು ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಛೋಪ್ರಾ ಇಷ್ಟೆಲ್ಲಾ ನೋವುಗಳನ್ನು ಅನುಭವಿಸಿದ್ದಾರಾ ಎಂದು ಆಶ್ಚರ್ಯಗೊಳ್ಳುವುದು ಗ್ಯಾರಂಟಿ.

Priyanka Chopra
ಪ್ರಿಯಾಂಕಾ ಛೋಪ್ರಾ

ಇದನ್ನೂ ಓದಿ: ಜ್ಯೋತಿಷಿಯಾಗಿ ಬಂದ ಕಿಚ್ಚ ಯಾರ ಭವಿಷ್ಯ ಹೇಳ್ತಾರೆ ಗೊತ್ತಾ?

ಕರಿಯರ್ ವಿಚಾರಕ್ಕೆ ಬರುವುದಾದರೆ ಪಿಗ್ಗಿ ಅಭಿನಯದ 'ದಿ ವೈಟ್ ಟೈಗರ್' ಸಿನಿಮಾ ಜನವರಿ 13 ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಲಿಸ್ಟ್​​​ನಲ್ಲಿ ಸೇರಿದೆ. ಸದ್ಯಕ್ಕೆ ಪ್ರಿಯಾಂಕಾ 'ಟೆಕ್ಸ್ಟ್ ಫಾರ್ ಯು' ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಪತಿ ನಿಕ್ ಜೋನ್ಸ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಪ್ರಶಾಂತ್ ನೀಲ್, ಪ್ರಭಾಸ್ ಕಾಂಬಿನೇಷನ್​​​ನಲ್ಲಿ ಮೂಡಿಬರುತ್ತಿರುವ 'ಸಲಾರ್' ಚಿತ್ರದ ವಿಶೇಷ ಹಾಡೊಂದರಲ್ಲಿ ಕೂಡಾ ಪ್ರಿಯಾಂಕಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.