ಹೈದರಾಬಾದ್: ಬಾಲಿಕಾ ವಧು ನಟಿ ಪ್ರತ್ಯುಷಾ ಬ್ಯಾನರ್ಜಿ ಆತ್ಮಹತ್ಯೆ ಮಾಡಿಕೊಂಡು 5 ವರ್ಷಗಳೇ ಕಳೆದಿವೆ. ಆದರೆ ಈಗ ದೂರದರ್ಶನ ನಿರ್ಮಾಪಕ ವಿಕಾಸ್ ಗುಪ್ತಾ ಅವರು ನಟಿ ಪ್ರತ್ಯುಷಾ ಬ್ಯಾನರ್ಜಿಯೊಂದಿಗೆ ಈ ಹಿಂದೆ ಡೇಟಿಂಗ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ವಿಕಾಸ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಒಮ್ಮೆ ಪ್ರತ್ಯುಷಾ ಅವರೊಂದಿಗೆ ಡೇಟಿಂಗ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ ನಟಿ ಪ್ರತ್ಯುಷಾಗೆ ವಿಕಾಸ್ ದ್ವಿಲಿಂಗಿ ಎಂಬುದು ತಿಳಿದಿರಲಿಲ್ಲವಂತೆ. ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರತ್ಯುಷಾ ರಾಹುಲ್ ರಾಜ್ ಸಿಂಗ್ ಜೊತೆ ರಿಲೇಶನ್ಶಿಪ್ನಲ್ಲಿದ್ದರು ಎಂದು ವಿಕಾಸ್ ಹೇಳಿದ್ದಾರೆ.
- " class="align-text-top noRightClick twitterSection" data="
">
ಮತ್ತೊಂದು ಸಂದರ್ಶನದಲ್ಲಿ ರಾಹುಲ್ ಪ್ರತ್ಯುಷಾಗೆ ವಿಕಾಸ್ನ ದ್ವಿಲಿಂಗಿ ಲೈಂಗಿಕಾಸಕ್ತಿ ಬಗ್ಗೆ ತಿಳಿದಿತ್ತು. ಆದರೆ ಆಕೆ ಆ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ಪ್ರತ್ಯುಷಾ ಎಂದಿಗೂ ವಿಕಾಸ್ ಜೊತೆ ಡೇಟಿಂಗ್ ಮಾಡಿಲ್ಲ ಎಂದು ರಾಹುಲ್ ಹೇಳಿದ್ದಾರೆ. ಪ್ರಚಾರಕ್ಕಾಗಿ ವಿಕಾಸ್, ಸತ್ತಿದ್ದರೂ ಜನಮಾನಸದಲ್ಲಿ ಜೀವಂತವಾಗಿರುವ ಅವಳ ಬಗ್ಗೆ ಈ ರೀತಿ ಏನೇನೋ ಹೇಳಿಕೆ ನೀಡಬಾರದು, ಪ್ರತ್ಯುಷಾ ಬದುಕಿದ್ದರೆ ಇದನ್ನು ಕೇಳಿ ವಿಕಾಸ್ಗೆ ಕಪಾಳಮೋಕ್ಷ ಮಾಡಿರುತ್ತಿದ್ದಳು ಎಂದು ರಾಹುಲ್ ಹೇಳಿದ್ದಾರೆ. ವಿಕಾಸ್ ಆಕೆಯ ವೈಯುಕ್ತಿಕ ಜೀವನದ ತೇಜೋವಧೆ ಮಾಡುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ವಿಕಾಸ್ ಗುಪ್ತಾನದು ಹುಚ್ಚುತನ. ಅವರು ಯಾವುದೇ ಮಟ್ಟಕ್ಕೆ ಇಳಿಯಬಲ್ಲ ವ್ಯಕ್ತಿಯಾಗಿದ್ದು, ಪ್ರತ್ಯುಷಾ ಅವರೊಂದಿಗೆ ಡೇಟಿಂಗ್ ಮಾಡಿದ್ದರೂ ಅದನ್ನು ಈಗ ಜಗತ್ತಿಗೆ ಬಹಿರಂಗಪಡಿಸುವ ಅಗತ್ಯವೇನು? ವಿಕಾಸ್ ಅವಳೊಂದಿಗೆ ಎಂದಿಗೂ ಡೇಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ರೀತಿ ಹೇಳುತ್ತಿದ್ದಾನೆ ಎಂದಿದ್ದಾರೆ ರಾಹುಲ್.
ಬಾಲಿಕಾ ವಧು ಧಾರವಾಹಿಯಲ್ಲಿ ಆನಂದಿ ಪಾತ್ರದ ಮೂಲಕ ಮನೆಮಾತಾಗಿದ್ದ ಪ್ರತ್ಯುಷಾ 2016 ರಲ್ಲಿ ತಾವಿದ್ದ ಫ್ಯ್ಲಾಟ್ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.