ಹೈದರಾಬಾದ್ (ತೆಲಂಗಾಣ): ಹಿಂದಿ, ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮದಲ್ಲಿ ಸಖತ್ ಬ್ಯುಸಿಯಾಗಿರುವ ಬಹುಭಾಷಾ ನಟಿ ಪೂಜಾ ಹೆಗ್ಡೆ (Multilingual actor Pooja Hegde) ಸದ್ಯ ಮಾಲ್ಡೀವ್ಸ್‌ನಲ್ಲಿ (Maldives vacation) ಎಂಜಾಯ್ ಮಾಡ್ತಿದ್ದಾರೆ.
ಭಾನುವಾರ ರಾತ್ರಿ ಪೂಜಾ ತನ್ನ ಮಾಲ್ಡೀವಿಯನ್ ರಜೆಯ (Maldives vacation) ಕೆಲವು ಅದ್ಭುತ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿರುವ ಚಿತ್ರಗಳಲ್ಲಿ ಪೂಜಾ ಉಷ್ಣವಲಯದ ರೆಸಾರ್ಟ್‌ನಲ್ಲಿ (tropical resort) ತೇಲುವ ಉಪಹಾರ ಸೇವಿಸುತ್ತಿದ್ದಾರೆ. ಕಂದು ಬಣ್ಣದ ಮೊನೊಕಿನಿ (brown monokini) ಮತ್ತು ಚಿನ್ನದ ಕಿವಿಯೋಲೆಗಳನ್ನು (gold earrings) ಧರಿಸಿದ ಪೂಜಾ ಫೋಟೋಗೆ ಪೋಸ್ ನೀಡಿದ್ದಾರೆ.
- " class="align-text-top noRightClick twitterSection" data="
">
ಚಿತ್ರಗಳನ್ನು ಹಂಚಿಕೊಂಡಿರುವ ಪೂಜಾ, ಅಸಾಧಾರಣ ಅನುಭವಗಳನ್ನು (extraordinary experiences) ಹುಡುಕುತ್ತಿರುವ ಸಾಮಾನ್ಯ ಹುಡುಗಿ (ordinary girl) ಎಂದು ಅಡಿ ಬರಹ ಬರೆದುಕೊಂಡಿದ್ದಾರೆ. ಅವರ ಚಿತ್ರಗಳಿಗೆ ಜಾನ್ವಿ ಕಪೂರ್, ರೋಹನ್ ವಿನೋದ್ ಮೆಹ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಲೈಕ್ ಜೊತೆ ಕಮೆಂಟ್ ಮಾಡಿದ್ದಾರೆ.
ರಾಮ್ ಚರಣ್ ಮತ್ತು ಚಿರಂಜೀವಿ ಜೊತೆ ‘ಆಚಾರ್ಯ’ (Acharya), ಪ್ರಭಾಸ್ ಜೊತೆ ‘ರಾಧೆ ಶ್ಯಾಮ್’ (Radhe Shyam), ಮಹೇಶ್ ಬಾಬು ಜೊತೆ ‘SSMB28’, ರಣವೀರ್ ಸಿಂಗ್ ಜೊತೆ ‘ಸರ್ಕಸ್’ (Cirkus) ಮತ್ತು ಸಲ್ಮಾನ್ ಖಾನ್ ಜೊತೆ ‘ಕಭಿ ಈದ್ ಕಭಿ ದೀಪಾವಳಿ’ (Kabhi Eid Kabhi Diwali) ಚಿತ್ರಗಳಲ್ಲಿ ಹೆಗ್ಡೆ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="
">
ತಮಿಳಿನ ಮುಗಮೂಡಿ (Mugamoodi) ಚಿತ್ರದ ಬಳಿಕ ನಟಿ ಪೂಜಾ ತನ್ನ ಮುಂಬರುವ ತಮಿಳು ಬ್ಲಾಕ್ ಕಾಮಿಡಿ ಆಕ್ಷನ್ ಚಿತ್ರ ಬೀಸ್ಟ್‌ನ (Tamil black comedy action film Beast) ಚಿತ್ರೀಕರಣವನ್ನು ಚೆನ್ನೈನಲ್ಲಿ ಪ್ರಾರಂಭಿಸಿದ್ದರು. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ (Nelson Dilipkumar directorial) ಮೂಡಿ ಬರಲಿರುವ ಈ ಚಿತ್ರದಲ್ಲಿ ಪೂಜಾ ಪಾತ್ರದ ಬಗ್ಗೆ ಹೆಚ್ಚು ಬಹಿರಂಗಪಡಿಸಲಾಗಿಲ್ಲ.