ಮೋದಿ ಬಯೋಪಿಕ್ 'ಪಿಎಂ ನರೇಂದ್ರ ಮೋದಿ' ಕಾಂಟ್ರವರ್ಸಿಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಚಿತ್ರ ತಡೆಗೆ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ತೀರ್ಮಾನದ ವಿರುದ್ಧ ಚಿತ್ರತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಚಿತ್ರದ ಮೇಲಿನ ತಡೆ ತೆರವುಗೊಳಿಸುವಂತೆ ಮನವಿ ಮಾಡಿತ್ತು.
ಇಂದು ಮುಖ್ಯನ್ಯಾಯಮೂರ್ತಿ ರಂಜನ್, ನ್ಯಾ. ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಒಳಗೊಂಡ ಪೀಠ ಈ ಅರ್ಜಿ ತಿರಸ್ಕರಿಸಿದೆ. ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
-
Supreme Court refuses to interfere with the Election Commission order banning release of biopic 'PM Narendra Modi'. pic.twitter.com/ZwYRzncZnx
— ANI (@ANI) April 26, 2019 " class="align-text-top noRightClick twitterSection" data="
">Supreme Court refuses to interfere with the Election Commission order banning release of biopic 'PM Narendra Modi'. pic.twitter.com/ZwYRzncZnx
— ANI (@ANI) April 26, 2019Supreme Court refuses to interfere with the Election Commission order banning release of biopic 'PM Narendra Modi'. pic.twitter.com/ZwYRzncZnx
— ANI (@ANI) April 26, 2019
ಇನ್ನು ಓಮಂಗ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿದ್ದಾರೆ. ಇದೇ 11 ರಂದು ಚಿತ್ರ ತೆರೆ ಕಾಣಬೇಕಾಗಿತ್ತು. ಆದರೆ, ಪ್ರತಿಪಕ್ಷಗಳ ವಿರೋಧ ಹಾಗೂ ಕೋರ್ಟ್ ಮೆಟ್ಟಿಲು ಏರಿದ್ದರ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಚಿತ್ರ ರಿಲೀಸ್ಗೆ ಬ್ರೇಕ್ ಹಾಕಿದೆ.