ಮುಂಬೈ: ಬಾಲಿವುಡ್ನ ಖ್ಯಾತ ಹಿನ್ನೆಲೆ ಗಾಯಕ ಕುಮಾರ್ ಸಾನು (62) ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಸಾನು ಅವರ ಸಾಮಾಜಿಕ ಜಾಲತಾಣದ ತಂಡ (Team KS) ಈ ಬಗ್ಗೆ ಫೇಸ್ಬುಕ್ ಪೇಜ್ನಲ್ಲಿ ಅಭಿಮಾನಿಗಳಿಗೆ ಈ ವಿಚಾರವನ್ನು ಖಚಿತಪಡಿಸಿದೆ. "ದುರಾದೃಷ್ಟವಶಾತ್, ಸಾನು ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಪ್ರಾರ್ಥಿಸೋಣ" ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಕಮೆಂಟ್ ಮಾಡಿರುವ ಅಭಿಮಾನಿಗಳು, ಪ್ಲೀಸ್ ಟೇಕ್ ಕೇರ್ ಸಾನು ದಾದಾ. ಗೆಟ್ ವೆಲ್ ಸೂನ್.. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.. ಎಂದೆಲ್ಲಾ ಹಾರೈಸಿದ್ದಾರೆ.
ಕುಮಾರ್ ಸಾನು ಆಸ್ಪತ್ರೆಗೆ ದಾಖಲಾಗಿದ್ದಾರಾ ಅಥವಾ ಮನೆಯಲ್ಲೇ ಐಸೋಲೇಷನ್ಗೆ ಒಳಪಟ್ಟಿದ್ದಾರಾ ಎಂಬುದರ ಕುರಿತು ಮಾಹಿತಿ ದೊರೆತಿಲ್ಲ.