ETV Bharat / sitara

ಸೋಷಿಯಲ್ ​ಮೀಡಿಯಾದಲ್ಲಿ ಜನ ನನ್ನನ್ನು ತುಂಬಾ ಪ್ರೀತಿಸುತ್ತಾರೆ: ನಟ ಪಂಕಜ್​ ತ್ರಿಪಾಠಿ - ಸೋಶಿಯಲ್​ ಮೀಡಿಯಾ ಬಗ್ಗೆ ಪಂಕಜ್​ ತ್ರಿಪಾಠಿ ಅಭಿಪ್ರಾಯ

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟ ಪಂಕಜ್​ ತ್ರಿಪಾಠಿ ಸೋಷಿಯಲ್​ ಮೀಡಿಯಾ ಮೂಲಕ ಜನ ನಮ್ಮನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದು ಗೊತ್ತಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ 83 , ಸಂದೀಪ್​ ಔರ್​ ಪಿಂಕಿ ಫರಾರ್​, ಮುಮಬೈ ಸಾಗಾ ಮತ್ತು ಬಚ್ಚನ್​ ಪಾಂಡೆನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

I know people love me through social media
ಪಂಕಜ್ ತ್ರಿಪಾಠಿ
author img

By

Published : Jan 25, 2021, 1:19 PM IST

ನವದೆಹಲಿ: ಬಿಟೌನ್​ನ ಅತ್ಯಂತ ಬ್ಯುಸಿ ನಟರಲ್ಲಿ ಪಂಕಜ್ ತ್ರಿಪಾಠಿ ಒಬ್ಬರು, ಆದರೆ ಅವರು ಸ್ಟಾರ್ ಎಂದರೇನು ಎಂಬುದೇ ಇದುವರೆಗೂ ಸರಿಯಾಗಿ ಅರ್ಥವಾಗುತ್ತಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರು ನನ್ನನ್ನು ಹೆಚ್ಚು ಪ್ರೀತಿಸುತ್ತಾರೆ ಎಂದುಕೊಂಡಿದ್ದೇನೆ ಎಂದು ಪಂಕಜ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಏನೂ ಬದಲಾಗಿಲ್ಲ, ನಾನೊಬ್ಬ ಸ್ಟಾರ್​ ಎಂಬುದರ ಕುರಿತು ನನಗೇನೂ ಅನಿಸುವುದಿಲ್ಲ, ಈ ಸ್ಟಾರ್​​ಗಿರಿ ಎಂಬುದರ ಬಗ್ಗೆ ನನಗೆ ಯಾವುದೇ ಐಡಿಯಾ ಇಲ್ಲ , ನನ್ನ ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಇದೆ, ಇದುವರೆಗೂ ನಾನು ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ ಎಂದು ಪಂಕಜ್​ ಹೇಳಿದ್ದಾರೆ. ಹಾಗೆಯೇ ಸೋಷಿಯಲ್ ​ಮೀಡಿಯಾಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

ಜನ ನನ್ನನ್ನು ಪ್ರೀತಿಸುತ್ತಾರೆ ಎಂಬ ವಿಷಯ ನನಗೆ ಸೋಷಿಯಲ್​ ಮೀಡಿಯಾ ಮೂಲಕ ತಿಳಿಯಿತು. ಕೆಲವೊಮ್ಮೆ ನನಗೆ ಸಿಗುವ ಪ್ರೇಕ್ಷಕರ ಪ್ರೀತಿ ಒಂದು ರೀತಿ ಫಿಕ್ಸ್​ಡ್​ ಡಿಪಾಸಿಟ್​ನಂತೆ ಎಂದು ನನಗನಿಸುತ್ತದೆ ಮತ್ತು ಅದನ್ನು ನಾನು ಬಡ್ಡಿ ಸಮೇತ ಅವರಿಗೆ ಹಿಂದಿರುಗಿಸಬೇಕು. ಆಗ ಜವಾಬ್ದಾರಿ ಮತ್ತು ನಂಬಿಕೆ ವೃದ್ಧಿಯಾಗುತ್ತದೆ. ನಾನು ಜನರಿಗೆ ಪ್ರೀತಿಯ ಬಡ್ಡಿ ನೀಡಲೇಬೇಕು ಎಂದು ಪಂಕಜ್​ ಹೇಳಿದ್ರು.

ಈ ವರ್ಷ ಪಂಕಜ್​ ತ್ರಿಪಾಠಿ ಸಾಲು - ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದು, 83 , ಸಂದೀಪ್​ ಔರ್​ ಪಿಂಕಿ ಫರಾರ್​, ಮುಂಬೈ ಸಾಗಾ ಮತ್ತು ಬಚ್ಚನ್​ ಪಾಂಡೆನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಮೂವರು ಸಚಿವರ ಖಾತೆ ಮರು ಹಂಚಿಕೆ: ಸುಧಾಕರ್‌ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.