ETV Bharat / sitara

ಇದ್ದಕ್ಕಿದ್ದಂತೆ ಕಾಣೆಯಾದ ಐಟಂ ಸಾಂಗ್​ ಸುಂದರಿ ನೋರಾ ಫತೇಹಿ ಇನ್‌ಸ್ಟಾಗ್ರಾಮ್ ಖಾತೆ! - ನೋರಾ ಫತೇಹಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್​

ಬಾಲಿವುಡ್​ನ ನೋರಾ ಫತೇಹಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ತಾರೆ. ಜಾಲತಾಣದಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಸ್​ ಹೊಂದಿರುವ ಈ ತಾರೆಯ ಇನ್​ಸ್ಟಾಗ್ರಾಮ್​ ಖಾತೆಯನ್ನು ಯಾರೋ ಹ್ಯಾಕ್​ ಮಾಡಲು ಯತ್ನಿಸಿದ್ದಾರೆ.

nora fatehi deleted instagram account gets restored
ನೋರಾ ಫತೇಹಿ
author img

By

Published : Feb 5, 2022, 1:36 PM IST

ಹೈದರಾಬಾದ್: ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಐಟಂ ಸಾಂಗ್​ ಸುಂದರಿ ನೋರಾ ಫತೇಹಿ ಇನ್‌ಸ್ಟಾಗ್ರಾಮ್ ಖಾತೆ ಇದೀಗ ಮತ್ತೆ ಆರಂಭವಾಗಿದೆ. ಶುಕ್ರವಾರ ನಟಿಯ ಇನ್‌ಸ್ಟಾಗ್ರಾಮ್ ಖಾತೆ ದಿಢೀರ್​ ಡಿಲೀಟ್​ ಆಗಿತ್ತು. ಇದರಿಂದ ಅವರ ಫಾಲೋವರ್ಸ್​ ಹತಾಶೆಯಾಗಿದ್ದರು. ಇಂದು ಮತ್ತೆ ಶುರುವಾಗಿದ್ದು ನಟಿಯೂ ಧನ್ಯವಾದ ಹೇಳಿದ್ದಾರೆ.

nora fatehi deleted instagram account gets restored
ನೋರಾ ಫತೇಹಿ

ತಮ್ಮ ಇನ್‌ಸ್ಟಾಗ್ರಾಮ್ ಖಾತೆ ದಿಢೀರ್​ ಡಿಲೀಟ್​ ಆಗಿರುವ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. 'ಕ್ಷಮಿಸಿ ಗೆಳೆಯರೇ, ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಯಾರೋ ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಕಳೆದ ದಿನದಿಂದ ಈ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಸದ್ಯ ಇನ್‌ಸ್ಟಾಗ್ರಾಮ್ ಖಾತೆ ಸರಿಪಡಿಸಲಾಗಿದ್ದು, ಯಥಾಸ್ಥಿತಿಯಂತೆ ನೋಡಬಹುದು.

ನನ್ನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ್ದಕ್ಕಾಗಿ ಇನ್‌ಸ್ಟಾಗ್ರಾಮ್ ತಂಡಕ್ಕೆ ಧನ್ಯವಾದಗಳು' ಎಂದಿದ್ದಾರೆ. ನಟಿಯ ಇನ್‌ಸ್ಟಾಗ್ರಾಮ್ ಮತ್ತೆ ಚಾಲನೆಗೊಂಡಿದ್ದರಿಂದ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ. ಅಸಲಿ ಕಾರಣ ಗೊತ್ತಲ್ಲದವರು ಜಾಲತಾಣದಲ್ಲಿ ತರಹೇವಾರಿಯಾಗಿ ಕಾಮೆಂಟ್​ ಮಾಡಿದ್ದಾರೆ.

37.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ನೋರಾ ಫತೇಹಿ ಅವರನ್ನು ಇನ್‌ಸ್ಟಾ ಕ್ವೀನ್ ಎಂದೇ ಕರೆಯಲಾಗುತ್ತದೆ. ಸದ್ಯ ನಟಿಯು ದುಬೈನಲ್ಲಿ ತಮ್ಮ ರಜಾದಿನಗಳನ್ನು ಎಂಜಾಯ್​ ಮಾಡುತ್ತಿದ್ದಾರೆ. ಸಿಂಹದೊಂದಿಗೆ ಕಾಣಿಸಿಕೊಂಡಿದ್ದ ನೋರಾ ತಮ್ಮ ಕೊನೆಯ ವಿಡಿಯೋವನ್ನು ಹಂಚಿಕೊಂಡಿದ್ದರು. ಬಳಿಕ ನಿಷ್ಕ್ರಿಯಗೊಂಡಿತ್ತು.

ನೋರಾ ಫತೇಹಿ ಸ್ಪಷ್ಟನೆ

ಇನ್‌ಸ್ಟಾಗ್ರಾಮ್​ನಲ್ಲಿ ನೋರಾ ಅವರ ಹೆಸರನ್ನು ಟೈಪ್ ಮಾಡಿದಾಗ ಕ್ಷಮಿಸಿ ಈ ಪುಟ ಲಭ್ಯವಿಲ್ಲ ಎಂದು ಹೇಳುತ್ತಿತ್ತು. ಇದರಿಂದ ಫಾಲೋವರ್ಸ್​ ಬೇಸರದಲ್ಲಿದ್ದರು. ಸದ್ಯ ತಮ್ಮ ನೆಚ್ಚಿನ ಬೋಲ್ಡ್​​ ಮತ್ತು ಹಾಟ್​ ಡಾನ್ಸರ್​ ಪೋಟೋ ಹಾಗೂ ವಿಡಿಯೋಗಳು ನೋಡಬಹುದಾಗಿದೆ.

ಇದನ್ನೂ ಓದಿ: ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ ಟಾಲಿವುಡ್​ ಹಾಸ್ಯ ನಟ ರಾಹುಲ್ ರಾಮಕೃಷ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.