ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುವ 'ಖತ್ರೋನ್ ಕೆ ಖಿಲಾಡಿ' ಶೋಗೆ ಭಾರಿ ಸಂಖ್ಯೆಯಲ್ಲಿ ವೀಕ್ಷಕರಿದ್ದಾರೆ. ಸಾಹಸಮಯ ಈ ರಿಯಾಲಿಟಿ ಶೋದಿಂದ ಬಿಗ್ ಬಾಸ್ ಖ್ಯಾತಿಯ ನಿಕ್ಕಿ ತಂಬೋಲಿ ಮೊದಲು ಎಲಿಮಿನೇಟ್ ಆಗಿದ್ದಾರೆ.
ಹಲವಾರು ಸೀಸನ್‌ಗಳನ್ನು ಕಂಪ್ಲೀಟ್ ಮಾಡಿರುವ ಸ್ಟಂಟ್ ಆಧಾರಿತ ಈ ರಿಯಾಲಿಟಿ ಶೋ ಈಗ 11ನೇ ಸೀಸನ್‌ಗೆ ತಲುಪಿದೆ. ಈ ಬಾರಿ ಸೌತ್ ಆಫ್ರಿಕಾದಲ್ಲಿ ಇದರ ಚಿತ್ರೀಕರಣ ನಡೆಸಲಾಗುತ್ತಿದೆ. "ಖತ್ರೋನ್ ಕೆ ಖಿಲಾಡಿ" ಸೀಸನ್ 11 ಮೊದಲ ಕಂತು ಶನಿವಾರ ಪ್ರಥಮ ಪ್ರದರ್ಶನಗೊಂಡಿತು. ಸೀಸನ್ 11 ರಲ್ಲಿ ನಿಕ್ಕಿ ತಂಬೋಲಿ ಕಾರ್ಯಕ್ರಮದಿಂದ ಹೊರಹಾಕಲ್ಪಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ.
ಇದನ್ನೂ ಓದಿ: ಕೊರೊನಾದಿಂದ ಸಹೋದರ ಸಾವು : ಖತ್ರೋನ್ ಕೆ ಕಿಲಾಡಿಯಲ್ಲಿ ನಾನು ಇರ್ತಿನಿ ಎಂದ ನಿಕ್ಕಿ ತಂಬೋಲಿ
ಬಿಗ್ ಬಾಸ್ ಖ್ಯಾತಿಯ ನಿಕ್ಕಿ ತಂಬೋಲಿ ಇತ್ತೀಚೆಗೆ ತನ್ನ ಸಹೋದರ ಜತಿನ್ ತಂಬೋಲಿಯನ್ನು ಕೊರೊನಾದಿಂದ ಕಳೆದುಕೊಂಡಿದ್ದಾಳೆ.