ವಾಹನ ಚಾಲಕರಿಗೆ ಸುರಕ್ಷತೆ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸೋದ್ರಲ್ಲಿ ಮುಂಬೈ ಪೊಲೀಸರದು ಒಂದು ಕೈ ಮುಂದು. ಸಿನಿಮಾ, ಕ್ರಿಕೆಟ್ಗಳಲ್ಲಿ ಘಟಿಸುವ ಚಿಕ್ಕಪುಟ್ಟ ಘಟನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿರುತ್ತಾರೆ.
ಡ್ರಿಂಕ್ ಆ್ಯಂಡ್ ಡ್ರೈವ್, ಹೆಲ್ಮೆಟ್ ಧರಿಸದೆ ಬೈಕ್ ಓಡಿಸೋದು, ವಾಹನ ಚಲಾಯಿಸುವಾಗ ಮೊಬೈಲ್ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಕ್ಯಾಚಿ ಸ್ಲೋಗನ್ಗಳ ಮೂಲಕ ಜನ ಜಾಗೃತಿ ಮೂಡಿಸುತ್ತಾರೆ. ಸಿನಿಮಾಗಳಲ್ಲಿ ಬರುವ ಡೈಲಾಗ್, ಸಾಂಗ್ಗಳನ್ನೇ ಹೆಕ್ಕಿಕೊಂಡು ಮೀಮ್ಸ್ಗಳನ್ನಾಗಿ ಮಾಡಿಕೊಳ್ಳುತ್ತಾರೆ. ಇದೀಗ ಇತ್ತೀಚಿಗಷ್ಟೆ ರಿಲೀಸ್ ಆಗಿರುವ ಕಬೀರ್ ಸಿಂಗ್ ಟ್ರೇಲರ್ನಲ್ಲಿ ಡೈಲಾಗ್ವೊಂದರ ಮೇಲೆ ಮುಂಬೈ ಪೊಲೀಸರ ಕಣ್ಣು ಬಿದ್ದಿದೆ. ಇದನ್ನೇ ಎತ್ತಿಕೊಂಡು ಪಾನಮತ್ತರಾಗಿ ವಾಹನ ಓಡಿಸೋರಿಗೆ ಕಿವಿಮಾತು ಹೇಳಿದ್ದಾರೆ.
-
Friend after drinks: Chal drive pe chalte hain.
— Mumbai Police (@MumbaiPolice) May 15, 2019 " class="align-text-top noRightClick twitterSection" data="
Me: pic.twitter.com/Cth8wG2mcf
">Friend after drinks: Chal drive pe chalte hain.
— Mumbai Police (@MumbaiPolice) May 15, 2019
Me: pic.twitter.com/Cth8wG2mcfFriend after drinks: Chal drive pe chalte hain.
— Mumbai Police (@MumbaiPolice) May 15, 2019
Me: pic.twitter.com/Cth8wG2mcf
ಕಬೀರ್ ಸಿಂಗ್ ಚಿತ್ರದ 'ನಾ ಬರೋದಿಲ್ಲ. ಹೇಳಿದ್ನಲ್ಲಾ? ಬರೋಲ್ಲ ಅಂದ್ರೆ ಬರೋಲ್ಲ ಅಷ್ಟೆ' ಎನ್ನುವ ಡೈಲಾಗ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದೆ. ಇದನ್ನು ಬಳಸಿಕೊಂಡಿರುವ ಪೊಲೀಸರು, ಮದ್ಯಪಾನ ಮಾಡಿದ ನನ್ನ ಸ್ನೇಹಿತ ಕಾರಿನಲ್ಲಿ ರೈಡ್ ಕರೆದಾಗ ನನ್ನ ಉತ್ತರ 'ನಾ ಬರೋದಿಲ್ಲ. ಹೇಳಿದ್ನಲ್ಲಾ? ಬರೋಲ್ಲ ಅಂದ್ರೆ ಬರೋಲ್ಲ ಅಷ್ಟೆ' ಎಂಬುದಾಗಿರುತ್ತೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.