ETV Bharat / sitara

ಅಂದು ಕಸದ ತೊಟ್ಟೆಯಲ್ಲಿದ್ದ ಅನಾಥ ಹೆಣ್ಣು ಮಗು ಈಗ ಬಾಲಿವುಡ್​ಗೆ ಎಂಟ್ರಿ ! - ನವಜಾತ ಹೆಣ್ಣು ಶಿಶು

ಹಿರಿಯ ನಟನ ದತ್ತು ಪುತ್ರಿಯೋಬ್ಬಳು ಬಾಲಿವುಡ್​ಗೆ ಬರಲು ಎದುರು ನೋಡುತ್ತಿದ್ದಾರೆ. ಈಗಾಗಲೇ ತಮ್ಮ ಬಾಲಿವುಡ್ ಎಂಟ್ರಿಗೆ ಸೋಷಿಯಲ್ ಮೀಡಿಯಾಗಳನ್ನು ವೇದಿಕೆಯನ್ನಾಗಿಸಿಕೊಂಡಿದ್ದಾಳೆ ಈ ಚೆಲುವೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : Apr 26, 2019, 2:03 PM IST

ಆಗತಾನೆ ಭೂಮಿಗೆ ಬಂದ ನವಜಾತ ಹೆಣ್ಣು ಶಿಶುವೊಂದು ಕಸದ ತೊಟ್ಟೆಯಲ್ಲಿ ಮಲಗಿತ್ತು. ದೈಹಿಕವಾಗಿಯೂ ದುರ್ಬಲವಾಗಿದ್ದ ಆ ಕಂದಮ್ಮಳ ನಾನ್​ಸ್ಟಾಪ್​ ಅಳು ನೋಡುಗರ ಕರುಳು ಹಿಂಡುವಂತಿತ್ತು. ಯಾರೋ ಪುಣ್ಯಾತ್ಮರು ಆ ಪುಟ್ಟು ಮಗುವನ್ನು ಶಿಶುಸಂರಕ್ಷಣಾ(ಅನಾಥಾಶ್ರಮ)ಕೇಂದ್ರಕ್ಕೆ ತಂದು ಒಪ್ಪಿಸಿದ್ದರು.

ಆ ತಬ್ಬಲಿ ಹೆಣ್ಣು ಮಗುವಿನ ಆಕ್ರಂಧನ ಎಲ್ಲೋ ಇದ್ದ ಬಾಲಿವುಡ್ ನಟನೋರ್ವನ ಹೃದಯಕ್ಕೆ ಕೇಳಿಸಿತ್ತು. ಕೂಡಲೇ ಈ ವಿಷಯ ತಿಳಿದ ಆ ಕರುಣಾಮಯಿ ನಟ ಮಗುವಿದ್ದ ಕೇಂದ್ರಕ್ಕೆ ಹೋಗಿ ತನ್ನ ತೋಳುಗಳಲ್ಲಿ ಎತ್ತಿಕೊಂಡ. ಅಲ್ಲೇ ದತ್ತು ಪಡೆಯಲು ನಿರ್ಧರಿಸಿದ. ಈ ಕಾರ್ಯಕ್ಕೆ ಆತನ ಪತ್ನಿ ಕೂಡ ಸಮ್ಮತಿ ನೀಡಿ ಬೆನ್ನಿಗೆ ನಿಂತಳು. ಅಂದು ರಾತ್ರಿಯಿಡೀ ಮಗುವನ್ನು ಮಡಿಲಲ್ಲಿ ಹಾಕಿಕೊಂಡ ಆ ತಾಯಿ, ದತ್ತು ಪ್ರಕ್ರಿಯೆಗಳನ್ನು ಮಗಿಸಿಕೊಂಡು ಮಗುವಿನೊಂದಿಗೆ ಮನೆಗೆ ಬಂದಿದ್ದಳು.

ಅದಾಗಲೇ ಆ ಬಾಲಿವುಡ್​ ಸೆಲಬ್ರಿಟಿ ದಂಪತಿಗೆ ಸ್ವಂತ ಮೂರು ಮಕ್ಕಳಿದ್ದರು. ಅವರೊಂದಿಗೆ ಈ ದತ್ತು ಪಡೆದ ಮಗುವನ್ನು ಬೆಳೆಸಿದರು. ಆಕೆಗೆ ದಿಶಾನಿ ಎಂದು ಮುದ್ದಾದ ಹೆಸರಿಟ್ಟು, ಪಾಲನೆ ಮಾಡಿದ್ರು. ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗಿಂತ ದಿಶಾಳಿಗೆ ಕೊಂಚ ಜಾಸ್ತಿನೇ ಪ್ರೀತಿಯ ಧಾರೆಯೆರೆದು, ಬೆಳಿಸಿ ದೊಡ್ಡವಳನ್ನಾಗಿ ಮಾಡಿದ್ರು. ಈಗ ಈ ಹುಡುಗಿ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಎದುರು ನೋಡುತ್ತಿದ್ದಾಳೆ...

ಹೌದು, ಇದು ಯಾವುದೋ ಕಟ್ಟುಕಥೆಯಲ್ಲ..ಬದಲಾಗಿ ರಿಯಲ್​ ಆಗಿ ನಡೆದಿದ್ದು. ಈ ದತ್ತು ಮಗಳ ತಂದೆ-ತಾಯಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಹಾಗೂ ಇವರ ಪತ್ನಿ ಯೋಗಿತಾ ಬಾಲಿ. ಈಗ ಇವರ ಮಗಳು ಬೆಳೆದು ದೊಡ್ಡವಳಾಗಿದ್ದಾಳೆ. ಅಪ್ಪನಂತೆ ತಾನೂ ಕೂಡ ಮುಖಕ್ಕೆ ಬಣ್ಣ ಹಚ್ಚಿ ಅಭಿನಯಿಸುವ ಆಸೆ ಹೊಂದಿದ್ದಾಳೆ. ಮಗಳ ಕನಸಿಗೆ ಅಪ್ಪ-ಅಮ್ಮ ಕೂಡ ಸಾಥ್ ನೀಡುತ್ತಿದ್ದಾರೆ. ಸದ್ಯಕ್ಕೆ ನ್ಯೂಯಾರ್ಕ್​ನಲ್ಲಿ ಅಭಿನಯ ತರಬೇತಿ ಪಡೆಯುತ್ತಿರುವ ದಿಶಾನಿ, ಸೋಷಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಹಾಕಿ ಪ್ರಖ್ಯಾತಿ ಪಡೆಯುತ್ತಿದ್ದಾರೆ. ಬಾಲಿವುಡ್​ಗೆ ಬರುವ ಮುನ್ನವೇ ಎಲ್ಲರ ಗಮನ ತಮ್ಮತ್ತ ಸೆಳೆಯುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.