ETV Bharat / sitara

ಶೆರ್ನಿ ಚಿತ್ರದ ಟೀಸರ್ ಔಟ್​: ದಕ್ಷ ಅರಣ್ಯಾಧಿಕಾರಿಯಾಗಿ ವಿದ್ಯಾಬಾಲನ್​ ಮಿಂಚಿಂಗ್​ - ಅಮಿತ್ ಮಸೂರ್ಕರ್

ನಟಿ ವಿದ್ಯಾ ಬಾಲನ್ ಅಭಿನಯದ ಶೆರ್ನಿ ಚಿತ್ರದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನಟಿ ವಿದ್ಯಾಬಾಲನ್​ ಫಿಯರ್​ಲೆಸ್​ ಫಾರೆಸ್ಟ್​​ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

vidya balan
ವಿದ್ಯಾ ಬಾಲನ್​
author img

By

Published : Jun 2, 2021, 5:34 PM IST

Updated : Jun 2, 2021, 5:46 PM IST

ನವದೆಹಲಿ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅಭಿನಯದ ಶೆರ್ನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಸುಮಾರು ಎರಡೂವರೆ ನಿಮಿಷದ ಟ್ರೈಲರ್ 42 ವರ್ಷದ ನಟಿ ವಿದ್ಯಾಬಾಲನ್​ ಅವರೇ ಚಿತ್ರದ ನಾಯಕ ಎಂಬುದನ್ನು ಬಿಂಬಿಸುತ್ತದೆ.

ಚಿತ್ರವನ್ನು ಅಮಿತ್ ಮಸೂರ್ಕರ್ ನಿರ್ದೇಶಿಸಿದ್ದಾರೆ. ಪಿತೃಪ್ರಧಾನ ಸಮಾಜವು ನಿಗದಿಪಡಿಸಿದ ಸಾಮಾಜಿಕ ಅಡೆತಡೆಗಳೆಂಬ ಕ್ರೂರ ಮೃಗಗಳ ನಡುವೆ ಆಕೆ ಒಬ್ಬ ನೇರ, ದಕ್ಷ ಅರಣ್ಯಾಧಿಕಾರಿಯಾಗಿ ಹೇಗೆ ಕಾರ್ಯನಿರ್ವಹಿಸುತ್ತಾಳೆ ಎಂಬುದೇ ಚಿತ್ರದ ಕಥಾವಸ್ತು.

'ಶೆರ್ನಿ' ಚಿತ್ರದ ಮೊದಲ ಟ್ರೈಲರ್ ಅನ್ನು ಅಮೆಜಾನ್ ಪ್ರೈಮ್ ವಿಡಿಯೋ ಅನಾವರಣಗೊಳಿಸಿದ್ದು, ಸುಮಾರು ಒಂದು ವರ್ಷದ ನಂತರ ಅವರ ಸಿನಿಮಾ ನೋಡಲು ಕಾದು ಕುಳಿತಿದ್ದ ವಿದ್ಯಾ ಬಾಲನ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

ಈ ಚಿತ್ರದಲ್ಲಿ ಶರದ್ ಸಕ್ಸೇನಾ, ಮುಕುಲ್ ಚಡ್ಡಾ, ವಿಜಯ್ ರಾಜ್, ಇಲಾ ಅರುಣ್, ಬ್ರಿಜೇಂದ್ರ ಕಲಾ ಮತ್ತು ನೀರಜ್ ಕಬಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿರುವುದನ್ನು ಟ್ರೈಲರ್​ನಲ್ಲಿ ಕಾಣಬಹುದು.

ಅಮಿತ್ ಮಸೂರ್ಕರ್ ನಿರ್ದೇಶನದ ಶೆರ್ನಿ ಮಾನವಕುಲ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸಂಕೀರ್ಣ ಸಮಸ್ಯೆಗಳನ್ನು ಅನ್ವೇಷಿಸುತ್ತದೆ. ವಿದ್ಯಾ ಬಾಲನ್ ಅರಣ್ಯಾಧಿಕಾರಿಯಾಗಿ ನಟಿಸಿದ್ದಾರೆ.

ವಿದ್ಯಾಬಾಲನ್​ ಸೇರಿದಂತೆ ಅನೇಕ ಅದ್ಭುತ ಕಲಾವಿದರ ನಡುವೆ ಕೆಲಸ ಮಾಡಿದದು ಒಂದು ಉತ್ತಮ ಅನುಭವ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಶೆರ್ನಿಯನ್ನು ಬಿಡುಗಡೆ ಮಾಡುವುದರಿಂದ ಈ ಸಿನಿಮಾ ಭಾರತ ಮತ್ತು ವಿಶ್ವದಾದ್ಯಂತ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ನಿರ್ದೇಶ ಅಮಿತ್ ಮಸೂರ್ಕರ್ ತಿಳಿಸಿದ್ದಾರೆ.

Last Updated : Jun 2, 2021, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.