ಹೈದರಾಬಾದ್ (ತೆಲಂಗಾಣ) : ಮಿಸ್ ಯುನಿವರ್ಸ್ ಕಿರೀಟ ತೊಟ್ಟ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಮತ್ತು ಮಾಡಲ್ ರೋಹ್ಮನ್ ಶಾಲ್ ಅವರ ಬ್ರೇಕಪ್ ಸುದ್ದಿ ಸದ್ಯ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಅವರ ಬ್ರೇಕಪ್ನ ಹಿಂದಿನ ಕಾರಣ ಏನು ಎಂದು ಯಾರಿಗೂ ತಿಳಿದಿಲ್ಲ. ನಟಿ ಲೈವ್ ಚಾಟ್ ಮಾಡುವಾಗ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ಗೌರವವೇ ನನಗೆ ಎಲ್ಲಾ (respect means everything to her) ಎಂದಿದ್ದಾರೆ.
ಗುರುವಾರ ಸುಶ್ಮಿತಾ ಸೇನ್ ತಮ್ಮ ಪುತ್ರಿಯರಾದ ರೆನೀ ಮತ್ತು ಅಲಿಸಾ ಅವರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಚಾಟ್ ಮಾಡಿದ್ದಾರೆ. ಈ ವೇಳೆ ಲೈವ್ ಚಾಟ್ನಲ್ಲಿ ಓರ್ವ ಅಭಿಮಾನಿ ಅವರಿಗೆ ಗೌರವ ಎಂದರೆ ಏನು ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ನಟಿ. "ಗೌರವ ಎಂದರೆ ನನಗೆ ಸರ್ವಸ್ವ. ನಾನು ಅದನ್ನು ಪ್ರೀತಿಗಿಂತ ಉನ್ನತ ಮಟ್ಟದಲ್ಲಿಟ್ಟಿದ್ದೇನೆ ". ಎಲ್ಲಿ ಗೌರವವಿಲ್ಲವೋ ಅಲ್ಲಿ ಪ್ರೀತಿಗೆ ಅರ್ಥವಿಲ್ಲ ಎಂದಿದ್ದಾರೆ.
- " class="align-text-top noRightClick twitterSection" data="
">
"ಪ್ರೀತಿ ಬರುತ್ತದೆ ಮತ್ತು ಹೋಗುತ್ತದೆ. ಆದರೆ, ಗೌರವವಿದ್ದರೆ, ಪ್ರೀತಿಯು ತನ್ನನ್ನು ತಾನು ವ್ಯಕ್ತಪಡಿಸಲು ಎರಡನೇ ಅವಕಾಶವನ್ನು ಹುಡುಕಿಕೊಂಡು ಬರುತ್ತದೆ. ಆದರೆ, ನೀವು ಪ್ರೀತಿಯ ಮೇಲೆ ಮಾತ್ರ ಗಮನಹರಿಸಿದರೇ ಅದು ತಾತ್ಕಾಲಿಕವಾಗಿರುತ್ತದೆ. ಗೌರವವಿಲ್ಲದಿದ್ದರೆ ಪ್ರೀತಿಯು ಇಲ್ಲ. ನನಗೆ ಗೌರವ ತುಂಬಾನೇ ಮುಖ್ಯ ಎಂದು 46 ವರ್ಷದ ನಟಿ ಸುಶ್ಮಿತಾ ಹೇಳಿದ್ದಾರೆ.
ಇದನ್ನೂ ಓದಿ: ಟಿಪ್ ಟಿಪ್ ಬರ್ಸಾ ಪಾನಿ ಹಿಂದಿ ಹಾಡಿಗೆ ಪಾಕ್ ಸಂಸದ ಡ್ಯಾನ್ಸ್ ; ವಿಡಿಯೋ ವೈರಲ್
ರೋಹ್ಮನ್ ಜೊತೆಗಿನ ತಮ್ಮ ಪ್ರೇಮ ಜೀವನದ ಬಗ್ಗೆ ಜಗತ್ತಿಗೆ ಹೇಳಲು ಎಂದಿಗೂ ಹಿಂದೆ ಸರಿಯದ ಮಾಜಿ ವಿಶ್ವ ಸುಂದರಿ, ತಾವಿಬ್ಬರು ಬೇರೆಯಾಗಲು ಕಾರಣವೇನೆಂದು ಇನ್ನೂ ಹೇಳಿಲ್ಲ. ಈ ಇಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಹಾಗಾಗಿ, ಈ ಜೋಡಿ ಮದುವೆ ಆಗುತ್ತೆ ಅಂತಲೂ ಹೇಳಲಾಗುತ್ತಿತ್ತು.
ಆದರೆ, ಅದಕ್ಕೂ ಮುನ್ನ ಬ್ರೇಕಪ್ ಆಗಿದೆ. ಈ ವಿಚಾರವಾಗಿ ಪೋಸ್ಟ್ ಹಂಚಿಕೊಂಡಿರುವ ಸುಷ್ಮಿತಾ ಸೇನ್, ಈ ಸಂಬಂಧ ಮುಗಿದು ಹೋಗಿದೆ. ಸ್ನೇಹಿತರಾಗಿ ಪಯಣ ಆರಂಭಿಸಿದ್ದೇವೆ. ಇನ್ನೂ ನಾವು ಸ್ನೇಹಿತರು ಮಾತ್ರ, ಪ್ರೀತಿ ಸದಾ ಇರುತ್ತದೆ ಎಂದು ಬರೆದುಕೊಂಡಿದ್ದಾರೆ. ನಟಿ ಸುಷ್ಮಿತಾ ಸೇನ್ ಮತ್ತು ರೋಹ್‌ಮನ್ 2018ರಿಂದ ಜೊತೆಗೆ ಇದ್ದರು.