ನಿರ್ದೇಶಕ ರಾಘವ ಲಾರೆನ್ಸ್ ಮತ್ತು ನಟ ಅಕ್ಷಯ್ ಕುಮಾರ್ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ಲಕ್ಷ್ಮಿ ಬಾಂಬ್’ ಚಿತ್ರ ನವೆಂಬರ್ 9ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದ್ದು, ಸದ್ಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ಟ್ರೈಲರ್ನಲ್ಲಿ ಅಕ್ಷಯ್ ಕುಮಾರ್ ನಾಯಕಿ ಮನೆಗೆ ಭೇಟಿ ನೀಡುತ್ತಾರೆ. ಅಲ್ಲಿ ಮಂಗಳಮುಖಿಯ ಆತ್ಮ ಅಕ್ಷಯ್ ಕುಮಾರ್ ದೇಹದಲ್ಲಿ ಸೇರುತ್ತೆ. ಮಂಗಳಮುಖಿಯ ಆತ್ಮ ಅಕ್ಷಯ್ ಕುಮಾರ್ ಸೇರಿದ ನಂತ್ರ ಹಾರಾರ್ ಕಾಮಿಡಿ ಶುರುವಾಗುತ್ತೆ. ಈ ಸನ್ನಿವೇಶಗಳು ಹಾರರ್ ಕಾಮಿಡಿಯಿಂದ ಕೂಡಿದೆ.
ಅಕ್ಷಯ್ ಚಿತ್ರಗಳು ಸಾಮಾನ್ಯವಾಗಿ ಕಾಮಿಡಿಯಿಂದ ಕೂಡಿರುತ್ತವೆ. ಈ ಹಿಂದೆ ಆಪ್ತಮಿತ್ರ ಚಿತ್ರ ರಿಮೇಕ್ ಮಾಡಿದಾಗ ವಿಷ್ಣುವರ್ಧನ ಪಾತ್ರವನ್ನು ಅಭಿನಯಿಸಿ ಮಿಂಚಿದ್ದರು.
‘ನನ್ನ ಮೂವತ್ತು ವರ್ಷದ ವೃತ್ತಿ ಬದುಕಿನಲ್ಲಿ ಎಂದಿಗೂ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಪಾತ್ರ ನಿಭಾಯಿಸುವುದು ಸವಾಲಿನಿಂದ ಕೂಡಿತ್ತು. ಬೌದ್ಧಿಕ ಸಾಮರ್ಥ್ಯವನ್ನೇ ಪಣಕ್ಕಿಟ್ಟು ಪಾತ್ರಕ್ಕೆ ಜೀವ ತುಂಬಿದ್ದೇನೆ. ಈ ಎಲ್ಲ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು’ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಅಕ್ಷಯ್ ಹೇಳಿದ್ದಾರೆ.
‘ಲಕ್ಷ್ಮಿ ಬಾಂಬ್’ ತಮಿಳಿನ ‘ಕಾಂಚನ’ ಚಿತ್ರದ ರಿಮೇಕ್. ತಮಿಳಿನಲ್ಲಿಯೂ ಈ ಚಿತ್ರಕ್ಕೆ ಲಾಘವ ಲಾರೆನ್ಸ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು.
ಭಾರತದಲ್ಲಿ ಚಿತ್ರಮಂದಿರಗಳು ಪುನರಾರಂಭಗೊಳ್ಳದಿರುವ ಪರಿಣಾಮ ಚಿತ್ರತಂಡ ಒಟಿಟಿಯ ಮೊರೆ ಹೋಗಿದ್ದು ಎಲ್ಲರಿಗೂ ಗೊತ್ತು. ಆದರೆ, ಇದು ಹೊಸ ಸುದ್ದಿ ಅಲ್ಲ. ಅಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಈ ಚಿತ್ರ ಬಿಡುಗಡೆಯಾದರೂ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುಎಇಯಲ್ಲಿ ಮಾತ್ರ ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಲಿದೆ.