ETV Bharat / sitara

ಕೇರಳದಲ್ಲಿ ಏರ್​ ಇಂಡಿಯಾ ವಿಮಾನ ದುರಂತ: ಮಡಿದವರಿಗೆ ಬಾಲಿವುಡ್ ತಾರೆಯರ ಸಂತಾಪ - ವಿಮಾನ ಅಪಘಾತದಲ್ಲಿ ಮಡಿದವರಿಗೆ ಸಂತಾಪ

ಅಕ್ಷಯ್ ಕುಮಾರ್, ಪ್ರೀತಿ ಜಿಂಟಾ, ಅಜಯ್ ದೇವಗನ್, ಇಶಾ ಗುಪ್ತಾ, ಸಂಗೀತ ಸಂಯೋಜಕ ಸಲೀಮ್ ಮರ್ಚೆಂಟ್ ಸೇರಿದಂತೆ ಬಾಲಿವುಡ್ ತಾರೆಯರು ಕೋಯಿಕ್ಕೋಡ್ ವಿಮಾನ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

Bollywood stars express grief, offer condolences
ಮಡಿದವರಿಗೆ ಬಾಲಿವುಡ್ ತಾರೆಯರಿಂದ ಸಂತಾಪ
author img

By

Published : Aug 8, 2020, 7:45 AM IST

ಮುಂಬೈ: ಕೇರಳದ ಕೋಯಿಕ್ಕೋಡ್​ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಏರ್​ ಇಂಡಿಯಾ ಎಕ್ಸ್​​ಪ್ರೆಸ್​ ವಿಮಾನ ದುರಂತದಲ್ಲಿ 19 ಜನ ಮೃತಪಟ್ಟು ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಅವಘಡಕ್ಕೆ ನಟ ಅಕ್ಷಯ್ ಕುಮಾರ್, ಪ್ರೀತಿ ಜಿಂಟಾ, ಅಜಯ್ ದೇವಗನ್, ಇಶಾ ಗುಪ್ತಾ, ಮತ್ತು ಶ್ರದ್ಧಾ ಕಪೂರ್ ತಮ್ಮ ನೋವು ವ್ಯಕ್ತಪಡಿಸಿದ್ದು, ಪ್ರಾಣ ಕಳೆದುಕೊಂಡ ಪ್ರಯಾಣಿಕರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದುರಂತ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ ನಟ ಅಕ್ಷಯ್ ಕುಮಾರ್, ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

  • Terrible news! Praying for the safety of all the passengers and crew onboard the #AirIndia Express flight. My deepest condolences to those who have lost their loved ones 🙏🏻

    — Akshay Kumar (@akshaykumar) August 7, 2020 " class="align-text-top noRightClick twitterSection" data=" ">

ಪೈಲಟ್ ನಿಧನದ ಬಗ್ಗೆ ಇಶಾ ಗುಪ್ತಾ ದುಃಖ ವ್ಯಕ್ತಪಡಿಸಿದರು ಮತ್ತು "ಸಿಪಿಟಿ ದೀಪಕ್ ವಸಂತ್ ಸಾಥೆ ಸರ್ ಅವರ ಕುಟುಂಬ ಮತ್ತು ಪ್ರೀತಿಪಾತ್ರರ ಪರ ಪ್ರಾರ್ಥಿಸುತ್ತೇನೆ ಮತ್ತು ಸಂತಾಪ ಸೂಚಿಸುತ್ತೇನೆ. ಅವರು ಕೇವಲ ಸಾಮಾನ್ಯ ತರಬೇತಿ ಪಡೆದ ಪೈಲಟ್ ಅಲ್ಲ, ಅವರು ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು ಅವರ ಆತ್ಮಕ್ಕೆ ಶಾಂತಿ ಸಿಗಲಿ, ಎಂದು ಟ್ವೀಟ್ ಮಾಡಿದ್ದಾರೆ.

  • Prayers and condolences to the family and loved ones of Cpt Deepak Vasanth Sathe Sir. He wasn’t just a regular trained pilot, he served as the Experimental Test Pilot in the IAF.🙏🏽 RIP sir #AirIndiaExpress

    — Esha Gupta (@eshagupta2811) August 7, 2020 " class="align-text-top noRightClick twitterSection" data=" ">

ಏರ್‌ಇಂಡಿಯಾ ವಿಮಾನ ದುರಂತದಿಂದ ವಿಚಲಿತನಾಗಿದ್ದೇನೆ‘. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಪರ ನಾನು ಪ್ರಾರ್ಥಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ ಎಂದು ನಟ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ

  • Disturbed by the #AirIndia flight tragedy. My prayers are with all the passengers and crew members onboard and deepest condolences to those who lost their loved ones.

    — Ajay Devgn (@ajaydevgn) August 7, 2020 " class="align-text-top noRightClick twitterSection" data=" ">

ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಪ್ರೀತಿ ಜಿಂಟಾ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, "ಕೋಯಿಕ್ಕೋಡ್​​ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಅಪಘಾತದ ಬಗ್ಗೆ ಕೇಳಿ ನೋವುಂಟಾಗಿದೆ. ಪ್ರಯಾಣಿಕರು ಮತ್ತು ವಿಮಾನದಲ್ಲಿದ್ದ ಸಿಬ್ಬಂದಿಗಳ ಆರೋಗ್ಯ ಮತ್ತು ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದಿದ್ದಾರೆ.

ಕೋಯಿಕ್ಕೋಡ್​​​​ ದುರಂತ ಹೃದಯ ವಿದ್ರಾವಕ ಘಟನೆಯಾಗಿದೆ. ಗಾಯಗೊಂಡ ಪ್ರಯಾಣಿಕರು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ ಎಂದು ದುರಂತ ಘಟನೆಯ ಬಗ್ಗೆ ಕೇಳಿ ಮನನೊಂದಿದ್ದರಿಂದ ಶ್ರದ್ಧಾ ಕಪೂರ್ ಟ್ವೀಟ್ ಮಾಡಿದ್ದಾರೆ.

ಕೇರಳದ ಕೋಯಿಕ್ಕೋಡ್​​ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ಎಕ್ಸ್​​ಪ್ರೆಸ್​ ವಿಮಾನ ದುರಂತದಲ್ಲಿ 19 ಜನ ಮೃತಪಟ್ಟು ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.