ಬಾಲಿವುಡ್ನ ಭರವಸೆಯ ನಟಿ ಖುಷಿ ಕಪೂರ್ ಇಂದು ತಮ್ಮ 21ನೇ ಹುಟ್ಟುಹಬ್ಬ ಆಚರಿಸಿಕೊಂಡರು.
ದೀಪಾವಳಿ ಹಬ್ಬದ ನಿಮಿತ್ತ ಕುಟುಂಬ ಸದಸ್ಯರೆಲ್ಲರೂ ಮುಂಬೈನಲ್ಲಿರುವ ಅವರ ಚಿಕ್ಕಪ್ಪ ಹಾಗೂ ನಟ ಅನಿಲ್ ಕಪೂರ್ ಅವರ ನಿವಾಸದಲ್ಲಿ ಸೇರಿ ಬರ್ತ್‌ಡೇ ಆಚರಿಸಿದರು.
ಬರ್ತ್‌ಡೇ ಗರ್ಲ್ ಖುಷಿ ಜೊತೆಗಿನ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜಾನ್ವಿ ಕಪೂರ್, ಅಕ್ಕನಿಗೆ ಶುಭ ಕೋರಿದ್ದಾರೆ.
ಅಂಶುಲಾ ಕಪೂರ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಕಾಣಿಸಿಕೊಂಡರು. ಬಾಲಿವುಡ್ನಲ್ಲಿ ಕಾಲೂರಲು ತಯಾರಿ ನಡೆಸುತ್ತಿರುವ ಖುಷಿ ಕಪೂರ್, ತನ್ನದೇ ದಾರಿ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ.