ಮುಂಬೈ (ಮಹಾರಾಷ್ಟ್ರ): ಖತ್ರೋನ್ ಕೆ ಖಿಲಾಡಿ ಸೀಸನ್ 11ರ ಸ್ಪರ್ಧಿ ಮತ್ತು ಬಾಲಿವುಡ್ ನಟಿ ಶ್ವೇತಾ ತಿವಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಿಮೆ ರಕ್ತದ ಒತ್ತಡ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದು ಶ್ವೇತಾ ತಿವಾರಿ ಆಯಾಸ ಮತ್ತು ಕಡಿಮೆ ರಕ್ತದೊತ್ತಡದಿಂದಾಗಿ ಶ್ವೇತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚು ಪ್ರಯಾಣ ಮಾಡಿದ ಕಾರಣ ಮತ್ತು ವಿಶ್ರಾಂತಿ ಇರದ ಕಾರಣದಿಂದ ಅವರಿಗೆ ಸಹಜವಾಗಿ ಆಯಾಸವಾಗಿದೆ ಎಂದು ಮೂಲಗಳು ಉಲ್ಲೇಖಿಸಿವೆ. ಈಗಾಗಲೇ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎನ್ನಲಾಗಿದೆ.
ಶ್ವೇತಾ ತಿವಾರಿ ಜುಲೈನಲ್ಲಿ ದಕ್ಷಿಣ ಆಫ್ರಿಕಾದ ಕೇಪ್ಟೌನ್ ಗೆ 'ಖತ್ರೋನ್ ಕೆ ಖಿಲಾಡಿ'ಯ 11ನೇ ಸೀಸನ್ನ ಚಿತ್ರೀಕರಣಕ್ಕಾಗಿ ತೆರಳಿದ್ದರು. ಭಾರತಕ್ಕೆ ಮರಳಿದ ನಂತರ ದೆಹಲಿಯಲ್ಲಿ ಕಿರುಚಿತ್ರವೊಂದಕ್ಕೆ ಅಭಿನಯಿಸುತ್ತಿದ್ದರು. ಈಗ ಅವರು ಆಸ್ಪತ್ರೆಯಲ್ಲಿ ಕಡಿಮೆ ರಕ್ತದೊತ್ತಡದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶ್ವೇತಾ ತಿವಾರಿ ಅವರ ಮಾಜಿ ಪತಿಯಾದ ಅಭಿನವ್ ಕೊಹ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಶ್ವೇತ ಅವರ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಂದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಜಗತ್ತು ಹೆಚ್ಚು ಚಿಂತೆ ಮಾಡುವ ವಿಚಾರ ಯಾವುದು?: ಇಲ್ಲಿದೆ ಸರ್ವೇ..!