ETV Bharat / sitara

ಪಾತ್ರೆ ತಿಕ್ಕಿದ ಕತ್ರಿನಾ... ಇನ್ನೂ ಏನೇನು ಮಾಡಿಸುತ್ತೋ ಈ ಕೊರೊನಾ! - ಕತ್ರಿನಾ ಇನ್​ಸ್ಟಾಗ್ರಾಂ

ಬಾಲಿವುಡ್​ನ ಮೋಹಕ ತಾರೆ ಕತ್ರಿನಾ ಕೈಫ್​ ಒಂದು ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಕತ್ ವೈರಲ್ ಆಗಿದೆ. ಮನೆಗೆಲಸದವರು ಸಹ ಕೆಲಸಕ್ಕೆ ಬಾರದ್ದರಿಂದ ಕತ್ರಿನಾ ಕೈಫ್ ಸ್ವತಃ ಪಾತ್ರೆ ತೊಳೆಯುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

katrina washing dishes
ಪಾತ್ರೆ ತಿಕ್ಕಿದ ಕತ್ರಿನಾ
author img

By

Published : Mar 24, 2020, 4:28 PM IST

ಮುಂಬೈ: ಈ ಕೊರೊನಾ ವೈರಸ್​ ಬಂದಿದ್ದೇ ಬಂದಿದ್ದು, ಎಲ್ಲರ ಲೈಫ್ ಸ್ಟೈಲೇ ಚೇಂಜ್ ಆಗ್ಬಿಟ್ಟಿದೆ. ಬಡವ ಬಲ್ಲಿದ ಎನ್ನದೇ ಎಲ್ಲರೂ ಕೊರೊನಾ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಇನ್ನು ಸೋಷಿಯಲ್ ಡಿಸ್ಟನ್ಸಿಂಗ್ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿರ್ದೇಶನಗಳಿಂದಾಗಿ ಮನೆಯಲ್ಲೇ ಕಾಲ ಕಳೆಯಬೇಕಾಗಿದೆ. ಆದರೆ ಎಷ್ಟೊತ್ತು ಅಂತ ಮನೇಲಿ ಸುಮ್ಮನೆ ಇರೋಕಾಗುತ್ತೆ?

ಕೊನೆಪಕ್ಷ ಟೈಂ ಪಾಸ್​ಗಾಗಿಯಾದರೂ ಏನಾದರೂ ಮಾಡುತ್ತಿರಬೇಕಾಗುತ್ತದೆ. ಈಗ ಇಂಥದ್ದೇ ಪರಿಸ್ಥಿತಿ ಸೆಲೆಬ್ರಿಟಿಗಳದ್ದೂ ಆಗಿದೆ. ಅದರಲ್ಲೂ ಬಾಲಿವುಡ್​ ಸ್ಟಾರ್​ಗಳು ತಾವು ಈ ಹಿಂದೆ ಮನೆಯಲ್ಲಿ ಇರುವಾಗ ಎಂದು ಮಾಡದ ಮನೆಗೆಲಸಗಳನ್ನು ಸಹ ಮಾಡುತ್ತಿದ್ದಾರೆ.

ಬಾಲಿವುಡ್​ನ ಮೋಹಕ ತಾರೆ ಕತ್ರಿನಾ ಕೈಫ್​ ಕೂಡ ಈಗ ಇಂಥದ್ದೇ ಒಂದು ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಕತ್ ವೈರಲ್ ಆಗಿದೆ. ಮನೆಗೆಲಸದವರು ಸಹ ಕೆಲಸಕ್ಕೆ ಬಾರದ್ದರಿಂದ ಕತ್ರಿನಾ ಕೈಫ್ ಸ್ವತಃ ಪಾತ್ರೆ ತೊಳೆಯುತ್ತಿರುವ ವಿಡಿಯೋ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

'ನಮ್ಮ ಮನೆಕೆಲಸದವಳು ಸಹ ಪ್ರತ್ಯೇಕವಾಸ ಬಯಸಿರುವುದರಿಂದ ಕೆಲಸಕ್ಕೆ ಬರುತ್ತಿಲ್ಲ. ನಾನು ಮತ್ತು ಇಜ್ಜಿ (ಇಸಾಬೆಲ್ಲಾ- ತಂಗಿ) ಸೇರಿಕೊಂಡು ಪಾತ್ರೆ ತೊಳೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ಬೇರೆಯವರಿಗೂ ಉಪಯೋಗವಾಗುವಂತೆ ಟ್ಯುಟೋರಿಯಲ್ ಒಂದನ್ನು ಮಾಡಬೇಕೆನಿಸುತ್ತಿದೆ ನನಗೆ..' ಎಂದು ಕತ್ರಿನಾ ಇನ್​ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ.

ಪಾತ್ರೆ ತೊಳೆಯುವಾಗ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಕೂಡ ಕತ್ರಿನಾ ಹೇಳುತ್ತ ಹೋಗಿದ್ದಾರೆ.

'ಒಂದೊಂದೇ ಪಾತ್ರೆಯನ್ನು ತಿಕ್ಕಿ, ತೊಳೆದು ರ್ಯಾಕ್​ನಲ್ಲಿ ಇಡಬೇಕಾ ಅಥವಾ ಎಲ್ಲವನ್ನೂ ಒಂದು ಬಾರಿ ತಿಕ್ಕಿ, ಕೊನೆಗೆ ತೊಳೆಯಬೇಕಾ ನೋಡಬೇಕು. ಇಲ್ಲ, ಎಲ್ಲವನ್ನೂ ಒಂದೇ ಬಾರಿ ತಕ್ಕಿ ನಂತರ ಎಲ್ಲ ತೊಳೆಯುವೆ..' ಎಂದಿದ್ದಾರೆ ಕತ್ರಿನಾ.

ಒಟ್ಟಾರೆಯಾಗಿ ಕತ್ರಿನಾ ಅವರ ಈ ವಿಡಿಯೋ ಕ್ಲಿಪ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ತಂದಿರುವುದಂತೂ ಸತ್ಯ.

ರೋಹಿತ್ ಶೆಟ್ಟಿಯ ಸೂರ್ಯವಂಶಿಯಲ್ಲಿ ಪ್ರಸ್ತುತ ಅಕ್ಷಯ್ ಕುಮಾರ್ ಅವರೊಂದಿಗೆ ಅಭಿನಯಿಸುತ್ತಿದ್ದಾರೆ ಕತ್ರಿನಾ. ಮಾ.24 ರಂದು ಫಿಲಂ ರಿಲೀಸ್ ಆಗ್ಬೇಕಿತ್ತು. ಆದ್ರೆ ಕೊರೊನಾ ಬಿಕ್ಕಟ್ಟಿನ ಕಾರಣದಿಂದ ರಿಲೀಸ್ ಡೇಟ್ ಮುಂದೆ ಹೋಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.