ರಾಮ್ ಮಧ್ವಾನಿ ನಿರ್ದೇಶನದಲ್ಲಿ ಕಾರ್ತಿಕ್ ಆರ್ಯನ್ ಅಭಿನಯದ ಥ್ರಿಲ್ಲರ್ ಸಿನಿಮಾ 'ಧಮಾಕಾ' ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಟೀಸರನ್ನು ಕಾರ್ತಿಕ್, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಿನಿಪ್ರಿಯರಿಗೆ ತಮ್ಮ ಪಾತ್ರದ ಪರಿಚಯ ಮಾಡಿಸಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ತಮಗಾಗಿ ನಿರ್ಮಿಸಿರುವ 'ಕಿಚ್ಚನ ಹೌಸ್'ಗೆ ಎಂಟ್ರಿ ಕೊಟ್ಟ ಸುದೀಪ್
'ಧಮಾಕಾ' ಸಿನಿಮಾದಲ್ಲಿ ಕಾರ್ತಿಕ್, ಮುಂಬೈ ಉಗ್ರರ ದಾಳಿ ಘಟನೆಯನ್ನು ಲೈವ್ ಪ್ರಸಾರ ಮಾಡುವ ಅರ್ಜುನ್ ಪಾಠಕ್ ಎಂಬ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಟೀಸರ್ ಬಿಡುಗಡೆಯಾಗಿ 2 ಗಂಟೆಗಳ ಅವಧಿಯಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಸರ್ ಅವಧಿ 1 ನಿಮಿಷ ಇದ್ದು ಕಾರ್ತಿಕ್ ಆರ್ಯನ್, ಕ್ಯಾಮರಾ ಮುಂದೆ ಕುಳಿತು, ನನ್ನ ಹೆಸರು "ಅರ್ಜುನ್ ಪಾಠಕ್, ನಾನು ಏನೇ ಹೇಳಿದರೂ ನಿಜವನ್ನೇ ಹೇಳುತ್ತೇನೆ" ಎಂದು ಮತ್ತೆ ಮತ್ತೆ ಹೇಳುವ ಡೈಲಾಗ್ ನೋಡುಗರಿಗೆ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿದೆ. ಚಿತ್ರವನ್ನು ರೊನ್ನಿ ಸ್ಕ್ರಿವಾಲಾ, ಅಮಿತ್ ಮಧ್ವಾನಿ ಹಾಗೂ ರಾಮ್ ಮಧ್ವಾನಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ರಾಮ್ ಮಧ್ವಾನಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
- " class="align-text-top noRightClick twitterSection" data="
">