ಹೈದರಾಬಾದ್: ಬಾಲಿವುಡ್ ತಾರೆಯರು ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಿಕೊಂಡಿದ್ದಾರೆ. ಕೊರೊನಾ ವೈರಸ್ ಕಳೆದ ಎರಡು ವರ್ಷಗಳಿಂದ ಎಲ್ಲ ಆಚರಣೆಗಳನ್ನು ಕಿತ್ತುಕೊಂಡಿದೆ. ಇದರ ಹೊರತಾಗಿಯೂ, ಬಾಲಿವುಡ್ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ಹೊಸ ವರ್ಷವನ್ನು ಮುಕ್ತವಾಗಿ ಆಚರಿಸಿಕೊಂಡಿದ್ದಾರೆ. ಈ ನಡುವೆ ಕೊರೊನಾಕ್ಕೆ ಒಳಗಾಗಿ ಚೇತರಿಸಿಕೊಂಡಿರುವ ಕರೀನಾ ಕಪೂರ್ ಖಾನ್ ಅವರು 2021ರ ನೆನಪುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವೊಂದನ್ನು ಶೇರ್ ಮಾಡಿಕೊಂಡು, ಇದು 2021ರ ಅತ್ಯುತ್ತಮ ನೆನಪು ಎಂದು ಬರೆದುಕೊಂಡಿದ್ದಾರೆ.
ಕರೀನಾ ಕಪೂರ್ ಖಾನ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವರ್ಷ ಜನಿಸಿದ ತನ್ನ ಎರಡನೇ ಮಗ ಜಹಾಂಗೀರ್ ಅಲಿ ಖಾನ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಜೆಹ್ ತನ್ನ ತುಂಟತನದ ಶೈಲಿಯಲ್ಲಿ ಕುಳಿತಿರುವುದನ್ನು ಕಾಣಬಹುದು. ಈ ಫೋಟೋ ಹಂಚಿಕೊಂಡಿರುವ ಕರೀನಾ, 'ಜೆಹ್ ಅವರ ಎರಡು ಹಲ್ಲುಗಳು 2021 ರ ವರ್ಷದ ಅತ್ಯುತ್ತಮ ಕ್ಷಣಗಳಲ್ಲಿ ಒಂದು ಎಂದಿರುವ ಅವರು, ❤️❤️❤️ ಡಿಸೆಂಬರ್ 31, #Mera Beta#ನನ್ನ ಮಗ,# ಹೊಸ ವರ್ಷ ಎಲ್ಲರಿಗೂ ಒಳಿತು ಮಾಡಲಿ' ಎಂದು ಬರೆದುಕೊಂಡಿದ್ದಾರೆ.(His two teeth…the best part of 2021❤️❤️❤️#31est December #Mera Beta# Blessed New year all…)
- " class="align-text-top noRightClick twitterSection" data="
">
ಇದಕ್ಕೂ ಮುನ್ನ ಗುರುವಾರ, ಕರೀನಾ ಕಪೂರ್ ಖಾನ್ ಅವರು ಪತಿ ಸೈಫ್ ಅಲಿ ಖಾನ್ ಅವರ ಚಿತ್ರವನ್ನು ಹಂಚಿಕೊಂಡಿದ್ದರು. ಕರೀನಾ ಕಪೂರ್ ಖಾನ್ ಇತ್ತೀಚೆಗಷ್ಟೇ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕರೀನಾ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದರು.
ಈ ನಡುವೆ ಕರೀನಾ ಕಪೂರ್ ಖಾನ್ ಅವರ ಮಲ ಮಗಳು ಸಾರಾ ಅಲಿ ಖಾನ್ ಕೂಡ ತಮ್ಮದೇ ಆದ ಶೈಲಿಯಲ್ಲಿ 2021 ನೇ ವರ್ಷಕ್ಕೆ ವಿದಾಯ ಹೇಳಿದ್ದಾರೆ. ಸಾರಾ ಅಲಿ ಖಾನ್ ಅವರು 2021 ರಲ್ಲಿ ಬದುಕಿದ ಪ್ರತಿ ಕ್ಷಣವನ್ನು ತೋರಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.