ETV Bharat / sitara

ಸಿಲ್ವರ್‌ಸ್ಕ್ರೀನ್‌ಗೆ ವರ್ಲ್ಡ್‌ಕಪ್‌ ಹೀರೊ ಕಪಿಲ್‌ ಪುತ್ರಿ.. ಅಪ್ಪನ ಕುರಿತ '83' ಚಿತ್ರದಲ್ಲಿ ಮಗಳ ಪಾತ್ರವೇನು? - ವಿಶ್ವಕಪ್

83 ಚಿತ್ರಕ್ಕೆ ಬಾಲಿವುಡ್​ ನಟ ರಣ್​ವೀರ್​ ಸಿಂಗ್ ನಾಯಕ. ಈ ಚಿತ್ರದಲ್ಲಿ ಕಪಿಲ್ ದೇವ್ ಪುತ್ರಿ ಅಮಿಯಾ ಸಹಾಯಕ ನಿರ್ದೇಶಕಿಯಾಗಿ ವರ್ಕ್ ಮಾಡುತ್ತಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ 2020ರ ವೇಳೆಗೆ ಬಿಡುಗಡೆಯಾಗಲಿದೆ.

ಚಿತ್ರ ಕೃಪೆ : ಇನ್​ಸ್ಟಾಗ್ರಾಂ
author img

By

Published : Mar 27, 2019, 9:58 AM IST

Updated : Mar 27, 2019, 1:53 PM IST

1983 ರಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಬರೆದಿತ್ತು. ಭಾರತಕ್ಕೆ ಚೊಚ್ಚಲ ಟ್ರೋಫಿ ತಂದುಕೊಟ್ಟು ಹೆಮ್ಮೆಯಿಂದ ಬೀಗಿತ್ತು. ಅಂದು ಕ್ರೀಡಾಂಗಣದಲ್ಲಿ ಪರಾಕ್ರಮ ಮೆರೆದ ಭಾರತ ಕ್ರಿಕೆಟ್​ ತಂಡದ ಕಲಿಗಳ ರೋಚಕ ಕಹಾನಿ ಈಗ ತೆರೆಯ ಮೇಲೆ ಬರುತ್ತಿದೆ.

'83' ಟೈಟಲ್​​ನಡಿ ಬಾಲಿವುಡ್​ನಲ್ಲಿ ಸದ್ದಿಲ್ಲದೇ ಚಿತ್ರ ಸೆಟ್ಟೇರಿದೆ. ನಟ ರಣ್​ವೀರ್​​ ಸಿಂಗ್​1983ರಲ್ಲಿ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದ ಅಂದಿನ ಟೀಂ ನಾಯಕ ಕಪಿಲ್ ದೇವ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ತೆರೆ ಮೇಲೆ ಕ್ರಿಕೆಟರ್​ ಆಗಿ ಕಾಣುತ್ತಿರುವ ರಣ್​ವೀರ್​​, ಪಾತ್ರಕ್ಕಾಗಿ ಸಖತ್ ತಾಲೀಮು ನಡೆಸಿದ್ದಾರೆ. ಸ್ವತಃ ಕಪಿಲ್​ ದೇವ್ ಅವರೇ ರಣವೀರ್​ಗೆ ಕ್ರಿಕೆಟ್​ನ ಪಾಠ ಮಾಡುತ್ತಿದ್ದಾರೆ.

Amiya
ಕಪಿಲ್​ ದೇವ್ ಪುತ್ರಿ ಅಮಿಯಾ (ಚಿತ್ರ ಕೃಪೆ : ಇನ್​ಸ್ಟಾಗ್ರಾಂ )

ಸದ್ಯ ಇಂಟ್ರೆಸ್ಟಿಂಗ್ ವಿಚಾರವೊಂದು ರಿವೀಲ್ ಆಗಿದೆ. 83 ಸಿನಿಮಾ ಮೂಲಕ ಕಪಿಲ್​ ದೇವ್ ಅವರ ಪುತ್ರಿ ಅಮಿಯಾ ಬಣ್ಣದ ಲೋಕಕ್ಕೆ ಪರಿಚಿತರಾಗುತ್ತಿದ್ದಾರೆ. ಹಾಗಂತ ಅವರು ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕಿಯಾಗಿ ವರ್ಕ್ ಮಾಡುತ್ತಿದ್ದಾರೆ. 23ರ ಈ ತರುಣೆ ಸಿನಿಮಾ ಪ್ರಿ-ಪ್ರೊಡಕ್ಷನ್​​ ಚಿತ್ರತಂಡಕ್ಕೆ ಸಹಾಯ ಮಾಡುತ್ತಿದ್ದಾರಂತೆ.

ಈ ಚಿತ್ರಕ್ಕೆ ಕಬೀರ್ ಖಾನ್​ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇಂಗ್ಲೆಂಡ್ ಹಾಗೂ ಸ್ಕಾಟ್​ಲ್ಯಾಂಡ್​ ನಲ್ಲಿ 100 ದಿನಗಳ ಕಾಲ ಈ ಚಿತ್ರಕ್ಕೆ ಶೂಟಿಂಗ್ ನಡೆಯಲಿದೆ. 2020 ರ ವೇಳೆಗ ತೆರೆಯ ಮೇಲೆ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು ಎನ್ನುತ್ತಿದೆ ಚಿತ್ರತಂಡ.

Intro:Body:Conclusion:
Last Updated : Mar 27, 2019, 1:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.