ETV Bharat / sitara

ಆ್ಯಸಿಡ್ ದಾಳಿ ಬಳಿಕ ಸಹೋದರಿ ಚೇತರಿಕೆಗೆ ಯೋಗ ಸಹಾಯ ಮಾಡಿದೆ: ಕಂಗನಾ ರಣಾವತ್​

ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಸಹೋದರಿ ರಂಗೋಲಿ ಆಘಾತದಿಂದ ಚೇತರಿಸಿಕೊಳ್ಳಲು ಯೋಗ ಸಹಾಯ ಮಾಡಿದೆ ಎಂದು ನಟಿ ಕಂಗನಾ ರಣಾವತ್​ ಹೇಳಿದ್ದಾರೆ. ರಂಗೋಲಿ 2-3 ವರ್ಷಗಳಲ್ಲಿ 53 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು ಎಂದು ಕಂಗನಾ ಬಹಿರಂಗಪಡಿಸಿದ್ದಾರೆ.

rangoli
rangoli
author img

By

Published : Jun 21, 2021, 8:46 PM IST

ಮುಂಬೈ: ರೋಡ್​ಸೈಡ್ ರೋಮಿಯೋನಿಂದ ಆ್ಯಸಿಡ್ ದಾಳಿಗೆ ತುತ್ತಾಗಿದ್ದ ತನ್ನ ಸಹೋದರಿ ರಂಗೋಲಿ ಚಾಂಡೆಲ್ ಆಘಾತದಿಂದ ಚೇತರಿಸಿಕೊಳ್ಳಲು ಯೋಗ ಸಹಾಯ ಮಾಡಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್​ ಬಹಿರಂಗಪಡಿಸಿದ್ದಾರೆ.

"ರಂಗೋಲಿಯು ಅತ್ಯಂತ ಸ್ಪೂರ್ತಿದಾಯಕ ಯೋಗ ಕಥೆಯನ್ನು ಹೊಂದಿದ್ದಾಳೆ. ಆಕೆ 21 ವರ್ಷದವಳಿದ್ದಾಗ ರೋಡ್​ಸೈಡ್ ರೋಮಿಯೋನೊಬ್ಬ ಆಕೆಗೆ ಆಸಿಡ್ ಎಸೆದಿದ್ದನು. ಅವಳ ಮುಖದ ಅರ್ಧ ಭಾಗ ಸುಟ್ಟುಹೋಯಿತು, ಒಂದು ಕಣ್ಣಿನ ದೃಷ್ಟಿ ಕಳೆದು ಹೋಯಿತು, ಒಂದು ಕಿವಿ ಕರಗಿತ್ತು ಮತ್ತು ಸ್ತನ ತೀವ್ರವಾಗಿ ಹಾನಿಗೊಳಗಾಯಿತು" ಎಂದು ಕಂಗನಾ ಫೋಟೋಗಳನ್ನು ಹಂಚಿಕೊಂಡು ಇನ್​​​ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ರಂಗೋಲಿ 2-3 ವರ್ಷಗಳಲ್ಲಿ 53 ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು ಎಂದು ಕಂಗನಾ ಬಹಿರಂಗಪಡಿಸಿದ್ದಾರೆ. ಆದರೆ, ಅವಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಅವಳು ಮಾತನಾಡಲು ನಿಲ್ಲಿಸಿದ್ದರಿಂದ ಅವಳ ಮಾನಸಿಕ ಆರೋಗ್ಯದ ಬಗ್ಗೆ ನನಗೆ ಚಿಂತೆಯಾಗಿತ್ತು. ಅವಳು ಆಘಾತದ ಸ್ಥಿತಿಯಲ್ಲಿದ್ದಾಳೆ ಎಂದು ವೈದ್ಯರು ಹೇಳಿದ್ದರು ಎಂದು ಕಂಗನಾ ಹೇಳಿದರು.

“ನಾನು ಆಕೆಯನ್ನು ಯೋಗ ತರಗತಿಗೆ ಕರೆದೊಯ್ದೆ ಮತ್ತು ಅವಳು ಯೋಗಾಭ್ಯಾಸ ಪ್ರಾರಂಭಿಸಿದಳು. ಅದಾದ ಬಳಿಕ ಅವಳಲ್ಲಿ ಹಲವಾರು ರೂಪಾಂತರವನ್ನು ನಾನು ನೋಡಿದೆ” ಎಂದು ಕಂಗನಾ ತಮ್ಮ ಸಹೋದರಿ ರಂಗೋಲಿ ಕುರಿತು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.