ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ಅವರ ಜೀವನ ಚರಿತ್ರೆ 'ತಲೈವಿ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡ ವಿಚಾರವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಕಂಗನಾ 20 ಕಿಲೋ ತೂಕವನ್ನು ಹೆಚ್ಚಿಸಿಕೊಂಡಿದ್ದರಂತೆ.
-
Journey back to my fit body wasn’t easy, I feel good but even in seven months not able to achieve my earlier stamina and agility back and those last 5 kgs arnt budging, there are moments of despair and then my director Vijay sir shows me Thalaivi footage and all seems fine ❤️ pic.twitter.com/UdpX3LdSaW
— Kangana Ranaut (@KanganaTeam) November 4, 2020 " class="align-text-top noRightClick twitterSection" data="
">Journey back to my fit body wasn’t easy, I feel good but even in seven months not able to achieve my earlier stamina and agility back and those last 5 kgs arnt budging, there are moments of despair and then my director Vijay sir shows me Thalaivi footage and all seems fine ❤️ pic.twitter.com/UdpX3LdSaW
— Kangana Ranaut (@KanganaTeam) November 4, 2020Journey back to my fit body wasn’t easy, I feel good but even in seven months not able to achieve my earlier stamina and agility back and those last 5 kgs arnt budging, there are moments of despair and then my director Vijay sir shows me Thalaivi footage and all seems fine ❤️ pic.twitter.com/UdpX3LdSaW
— Kangana Ranaut (@KanganaTeam) November 4, 2020
ಕಳೆದ 7 ತಿಂಗಳಿಂದ ನಾನು ಮತ್ತೆ ಮೊದಲಿನಂತೆ ಆಗಲು ಸೆಣಸಾಡುತ್ತಿದ್ದೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. 'ತಲೈವಿ' ಚಿತ್ರದ ತಮ್ಮ ಲುಕ್ ಹಾಗೂ ಈಗಿನ ಕೆಲವೊಂದು ಫೋಟೋಗಳನ್ನು ಕಂಗನಾ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. "ತಲೈವಿ ಚಿತ್ರಕ್ಕಾಗಿ ನಾನು 20 ಕಿಲೋ ತೂಕ ಹೆಚ್ಚಿಸಿಕೊಂಡಿದ್ದೆ. ಇದರಿಂದ ನನಗೆ ಕೆಲವೊಂದು ಸಮಸ್ಯೆಗಳು ಕಾಡುತ್ತಿವೆ. ಆದರೆ ಒಂದು ಒಳ್ಳೆಯ ಪಾತ್ರಕ್ಕಾಗಿ ಮಾಡಿದ ತ್ಯಾಗದ ಮುಂದೆ ಈ ನೋವು ದೊಡ್ಡದಲ್ಲ" ಎಂದು ಕಂಗನಾ ಬರೆದುಕೊಂಡಿದ್ದಾರೆ.
"ನಾನು ಮೊದಲಿನಂತೆ ಆಗಲು ಬಹಳ ಕಷ್ಟಪಡುತ್ತಿದ್ದೇನೆ. ಆದರೆ ಅದು ಸುಲಭವಾಗಿ ಸಾಧ್ಯವಾಗುತ್ತಿಲ್ಲ. ಚಿತ್ರದ ನಿರ್ದೇಶಕ ವಿಜಯ್ ನನಗೆ 'ತಲೈವಿ' ಚಿತ್ರದ ಕೆಲವೊಂದು ದೃಶ್ಯಗಳನ್ನು ತೋರಿಸಿ, ಸಿನಿಮಾ ನಿಜವಾಗಿಯೂ ಚೆನ್ನಾಗಿ ಮೂಡಿಬಂದಿದೆ" ಎಂದು ಹೇಳಿದಾಗ ನನಗೆ ಬಹಳ ಖುಷಿ ಆಯ್ತು ಎಂದು ಕೂಡಾ ಕಂಗನಾ ಮತ್ತೊಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಅಕ್ಟೋಬರ್ನಲ್ಲಿ 'ತಲೈವಿ' ಚಿತ್ರೀಕರಣ ಮುಗಿದಿದೆ. ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ಬಿಡುಗಡೆಯಾಗಲಿದೆ. ಸಿನಿಪ್ರಿಯರು ಕೂಡಾ ಈ ಬಹುನಿರೀಕ್ಷಿತ ಚಿತ್ರವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.