ETV Bharat / sitara

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ; ನಾನು 'ಪವರ್‌ಫುಲ್‌' ಮಹಿಳೆ ಎಂದ ನಟಿ

ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ತಿದ್ದುಪಡಿ, ಅಳಿಸುವಿಕೆ, ಮಾರ್ಪಾಡು ಅಥವಾ ಸೆನ್ಸಾರ್ ಇಲ್ಲದೇ ಅವರ ಯಾವುದೇ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲು ಅನುಮತಿ ನೀಡಬಾರದು ಎಂದು ವಕೀಲ ಚಂದ್ರಪಾಲ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ..

Kangana Ranaut laughs off plea in SC against her, says she is 'powerful'
ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ; ನಾನು 'ಪವರ್‌ಫುಲ್‌' ಮಹಿಳೆ ಎಂದ ನಟಿ
author img

By

Published : Dec 1, 2021, 6:49 PM IST

ಹೈದರಾಬಾದ್‌(ತೆಲಂಗಾಣ): ದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡಲು ಭವಿಷ್ಯದಲ್ಲಿ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರ ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಸೆನ್ಸಾರ್ ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಗನಾ, ನಾನು ದೇಶದ ಅತ್ಯಂತ ಶಕ್ತಿಶಾಲೆ ಮಹಿಳೆ ಎಂದಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾದಲ್ಲಿ ಸುದ್ದಿಸಂಸ್ಥೆಯೊಂದರ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ಫೋಸ್ಟ್‌ ಮಾಡಿದ್ದು, ನಗುತ್ತಾ ಹ.. ಹ.. ಹ.. ನಾನು ಈ ದೇಶದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಬರೆದುಕೊಂಡಿದ್ದಾರೆ.

ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ತಿದ್ದುಪಡಿ, ಅಳಿಸುವಿಕೆ, ಮಾರ್ಪಾಡು ಅಥವಾ ಸೆನ್ಸಾರ್ ಇಲ್ಲದೆ ಅವರ ಯಾವುದೇ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲು ಅನುಮತಿ ನೀಡಬಾರದು ಎಂದು ವಕೀಲ ಚಂದ್ರಪಾಲ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಟಿ ಕಂಗನಾ ವಿರುದ್ಧ ದೇಶದಾದ್ಯಂತ ದಾಖಲಾಗಿರುವ ಎಲ್ಲ ಎಫ್‌ಐಆರ್‌ಗಳನ್ನು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲು ಹಾಗೂ ಆರು ತಿಂಗಳೊಳಗೆ ಚಾರ್ಜ್‌ಶೀಟ್ ಸಲ್ಲಿಸುವಂತೆ ನಿರ್ದೇಶನ ಕೋರಿ ವಕೀಲ ಚರಣ್‌ಜೀತ್ ಸಿಂಗ್ ಚಂದ್ರಪಾಲ್ ಸುಪ್ರೀಂಕೋರ್ಟ್ ಅನ್ನು ಕೋರಿದ್ದಾರೆ.

ಇದನ್ನೂ ಓದಿ: ತನ್ನ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ನಟಿ ಕಂಗನಾ ರಣಾವತ್‌ ಪ್ರತಿಕ್ರಿಯೆ ಹೀಗಿತ್ತು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.