ETV Bharat / sitara

47ರ ನಟನಿಗೆ 20ರ ಹರೆಯದ ನಟಿ ಜೋಡಿ : ವಯಸ್ಸಿನ ಅಂತರ ಸಮರ್ಥಿಸಿದ ಕಂಗನಾ ರಣಾವತ್ - ಕಂಗನಾ ರಣಾವತ್​ ಲೇಟೆಸ್ಟ್​​ ನ್ಯೂಸ್​​

ನಟ-ನಟಿಯ ವಯಸ್ಸಿನ ಅಂತರದ ಬಗ್ಗೆ ಅನೇಕರು ನನಗೆ ಎಚ್ಚರಿಕೆ ನೀಡಿದರು. ಏಜ್​ ಗ್ಯಾಪ್​ ಇದ್ದರೆ ಪರವಾಗಿಲ್ಲ ಬಿಡಿ. ಅದು ನಮ್ಮ ಸಿನಿಮಾದ ಕಥೆಗೆ ಸೂಕ್ತ ಆಗುತ್ತದೆ. ಈ ಚಿತ್ರಕ್ಕೆ ನಾಯಕಿಯಾಗಿ ಅವನೀತ್​ ಸೂಕ್ತ ಎಂಬುದು ನನ್ನ ಅಭಿಪ್ರಾಯ..

Tiku Weds Sheru
ಟಿಕು ವೆಡ್ಸ್ ಶೇರು
author img

By

Published : Feb 11, 2022, 4:34 PM IST

ಹೈದರಾಬಾದ್(ತೆಲಂಗಾಣ) : ನಟಿ ಕಂಗನಾ ರಣಾವತ್​ ಇದೇ ಮೊದಲ ಬಾರಿಗೆ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. 'ಮಣಿಕರ್ಣಿಕಾ ಫಿಲ್ಮ್ಸ್' ನಿರ್ಮಾಣ ಸಂಸ್ಥೆ ಆರಂಭಿಸಿರುವ ಕಂಗನಾ ರಣಾವತ್​​ ​ಅವರು, 'ಟಿಕು ವೆಡ್ಸ್​ ಶೇರು' ಚಿತ್ರಕ್ಕೆ ನಿರ್ಮಾಪಕಿ ಆಗಿದ್ದಾರೆ.

ಈ ಸಿನಿಮಾದಲ್ಲಿ ನಾಯಕ ನವಾಜುದ್ದೀನ್​ ಸಿದ್ದಿಖಿ ಅವರಿಗೆ ಜೋಡಿಯಾಗಿ ಅವನೀತ್​ ಕೌರ್​ ಅಭಿನಯಿಸಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಕೆಲವು ಪೋಸ್ಟರ್​ಗಳ ಮೂಲಕ ಗಮನ ಸೆಳೆಯಲಾಗಿದೆ. ಆದರೆ, ಈ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್​ ವಯಸ್ಸಿನ ನಡುವೆ ಬರೋಬ್ಬರಿ 27 ವರ್ಷಗಳ ಅಂತರ ಇದೆ. ಅದಕ್ಕೆ ಕಂಗನಾ ರಣಾವತ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನವಾಜುದ್ದೀನ್​ ಸಿದ್ದಿಖಿ ಅವರಿಗೆ ಈಗ 47 ವರ್ಷ. ಅವರಿಗೆ ಜೋಡಿ ಆಗಿರುವ ಅವನೀತ್​ ಕೌರ್​ ಅವರಿಗೆ ಈಗಿನ್ನೂ 20 ವರ್ಷ. ಇವರಿಬ್ಬರನ್ನು ಜೋಡಿ ಮಾಡುವುದು ಸೂಕ್ತವಲ್ಲ ಎಂದು ಕೆಲವರು ಕಂಗನಾಗೆ ಬುದ್ಧಿ ಮಾತು ಹೇಳಿದ್ದರು. ಆದರೆ, ಅದನ್ನು ಕಂಗನಾ ಕೇಳಿಲ್ಲ. ನಿರ್ಮಾಪಕಿಯಾಗಿ ತಮ್ಮ ಸಿನಿಮಾದ ಕಲಾವಿದರ ಆಯ್ಕೆಯನ್ನು ಅವರು ಸಮರ್ಥಿಸಿದ್ದಾರೆ. ಅದಕ್ಕೆ ಅವರು ಸೂಕ್ತ ಕಾರಣವನ್ನೂ ನೀಡಿದ್ದಾರೆ.

ನಟ-ನಟಿಯ ವಯಸ್ಸಿನ ಅಂತರದ ಬಗ್ಗೆ ಅನೇಕರು ನನಗೆ ಎಚ್ಚರಿಕೆ ನೀಡಿದರು. ಏಜ್​ ಗ್ಯಾಪ್​ ಇದ್ದರೆ ಪರವಾಗಿಲ್ಲ ಬಿಡಿ. ಅದು ನಮ್ಮ ಸಿನಿಮಾದ ಕಥೆಗೆ ಸೂಕ್ತ ಆಗುತ್ತದೆ. ಈ ಚಿತ್ರಕ್ಕೆ ನಾಯಕಿಯಾಗಿ ಅವನೀತ್​ ಸೂಕ್ತ ಎಂಬುದು ನನ್ನ ಅಭಿಪ್ರಾಯ.

ನವಾಜುದ್ದೀನ್​ ಜತೆ ಅವರ ಜೋಡಿ ಸೂಪರ್​ ಹಿಟ್​ ಆಗಲಿದೆ. ಮುಂದೇನಾಗುತ್ತೋ ನೋಡೋಣ. ಬಾಕಿ ಎಲ್ಲವೂ ನಿಮ್ಮ ಕೈಯಲ್ಲಿದೆ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

ಇದನ್ನೂ ಓದಿ: ನಿರ್ಮಾಪಕಿಯಾಗಿ ಡಿಜಿಟಲ್ ರಂಗ ಪ್ರವೇಶಿಸಲಿದ್ದಾರೆ ಕಂಗನಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.