ಬಾಲಿವುಡ್ನ ಬೆಂಕಿ ಚೆಂಡು ಕಂಗನಾ ರಣಾವತ್ ಮತ್ತೊಮ್ಮೆ 'ಗ್ರೀಕ್ ಆಫ್ ಗಾಡ್' ಜತೆ ಯುದ್ಧಕ್ಕಿಳಿದಿದ್ದಾರೆ. ಹೃತಿಕ್ ರೋಷನ್ ಅವರ 'ಸೂಪರ್ 30' ಸಿನಿಮಾ ಬಿಡುಗಡೆಯಂದೇ ತಮ್ಮ 'ಮೆಂಟಲ್ ಹೈ ಕ್ಯಾ'? ಚಿತ್ರ ತೆರೆಗೆ ತರುತ್ತಿದ್ದಾರೆ.
- " class="align-text-top noRightClick twitterSection" data="
">
ಬಿಟೌನ್ ಡೇರ್ ನಟಿ ಕಂಗನಾ ಹಾಗೂ ಹೃತಿಕ್ ರೋಷನ್ ನಡುವೆ ಕದನ ಇರೋದು ಎಲ್ಲರಿಗೂ ಗೊತ್ತು. 2016ರಿಂದ ಶುರುವಾದ ಈ ತಾರೆಯರ ಜಗಳಕ್ಕೆ ಫುಲ್ ಸ್ಟಾಪ್ ಬೀಳೋ ಲಕ್ಷಣಗಳು ಕಾಣುತ್ತಿಲ್ಲ. ಆಗಾಗ ಹೃತಿಕ್ ಮೇಲೆ ಹರಿಹಾಯುವ ಕಂಗನಾ ಇದೀಗ ಬೆಳ್ಳಿ ಪರದೆ ಮೇಲೂ ಕಾಂಪೀಟ್ ಕೊಡಲು ಸಜ್ಜಾಗಿದ್ದಾರೆ.
- " class="align-text-top noRightClick twitterSection" data="
">
ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರ ಜೂನ್ 26 ರಂದು ಬಿಡುಗಡೆ ಆಗೋ ಪಕ್ಕಾ ಆಗಿದೆಯಂತೆ. ಇದೇ ಡೇಟ್ಗೆ ಕಂಗನಾ ಅಭಿನಯಿಸಿರುವ 'ಮೆಂಟಲ್ ಹೈ ಕ್ಯಾ' ಸಿನಿಮಾ ಕೂಡ ರಿಲೀಸ್ ಆಗಲಿದೆ. ಈ ಮೊದಲು ಜೂನ್ 21 ಕ್ಕೆ ಸಿನಿಮಾ ಬಿಡುಗಡೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಇದೀಗ ದಿನಾಂಕ ಪೋಸ್ಟ್‌ಪೋನ್ ಮಾಡಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ವಿತರಕರ ಅನುಕೂಲಕ್ಕಾಗಿ ದಿನಾಂಕ ಬದಲಿಸಲಾಗಿದೆ ಹೊರತು, ಮತ್ತ್ಯಾವ ದುರುದ್ದೇಶವೂ ಇಲ್ಲ ಎಂದಿದೆ. ಆದರೆ, ಬಾಲಿವುಡ್ ಮಂದಿ ಮಾತ್ರ ಹೃತಿಕ್ ಚಿತ್ರಕ್ಕೆ ಟಕ್ಕರ್ ಕೊಡಲು ಕಂಗನಾ ಈ ರೀತಿ ಮಾಡಿದ್ದಾರೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ.
- " class="align-text-top noRightClick twitterSection" data="
">
ಹಾಗೇ ನೋಡಿದ್ರೆ 'ಸೂಪರ್ 30' ಚಿತ್ರ ಜನವರಿ 26 ರಂದೇ ಬಿಡುಗಡೆಯಾಗಬೇಕಿತ್ತು. ಇಲ್ಲಿಯೂ ಅಡ್ಡಗಾಲು ಹಾಕಿದ್ದ ಕಂಗನಾ, ತಮ್ಮ ಮಣಿಕರ್ಣಿಕಾ ಸಿನಿಮಾ ಜನವರಿ 26 ರಂದೇ ಬಿಡುಗಡೆ ಮಾಡಿದ್ದರು. ಸುಖಾಸುಮ್ಮನೆ ಪೈಪೋಟಿ ಯಾಕೆ ಎಂದು 'ಸೂಪರ್ 30' ಚಿತ್ರತಂಡ ಹಿಂದಕ್ಕೆ ಸರಿದಿತ್ತು. ಇದೀಗ ಮತ್ತೆ ಕಂಗನಾ ಸವಾಲೊಡಿದ್ದು, ಬಾಕ್ಸ್ ಆಫೀಸ್ನಲ್ಲಿ ಸೂಪರ್ 30 ಹಾಗೂ ಮೆಂಟಲ್ ಹೈ ಕ್ಯಾ ಕ್ಲಾಶ್ ಆಗೋದು ಪಕ್ಕಾ ಆಗಿದೆ.