ಮುಂಬೈ (ಮಹಾರಾಷ್ಟ್ರ): ಕಾಜಲ್ ಅಗರ್ವಾಲ್ ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಅವರ ಪತಿ ಗೌತಮ್ ಕಿಚ್ಲು ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದಾರೆ.
- " class="align-text-top noRightClick twitterSection" data="
">
ಕಾಜಲ್ ಗರ್ಭಿಣಿಯಾಗಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದೆ. ಶನಿವಾರ ಸಂಜೆ ಕಿಚ್ಲು 2022 ರಲ್ಲಿ ತಮ್ಮ ಮೊದಲ ಸಂತೋಷವನ್ನು ಸ್ವಾಗತಿಸಲು ಸಿದ್ಧರಾಗಿದ್ದೇವೆ ಎಂದು ದೃಢಪಡಿಸಿದ್ದಾರೆ.
ಅಭಿಮಾನಿಗಳು ಪ್ರೀತಿಯಿಂದ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಕಾಜಲ್ ಅಗರ್ವಾಲ್ ಮತ್ತು ಗೌತಮ್ ಕಿಚ್ಲು ಅಕ್ಟೋಬರ್ 2020 ರಲ್ಲಿ ಮುಂಬೈನಲ್ಲಿ ಸಪ್ತಪದಿ ತುಳಿದಿದ್ದರು. ತೆಲುಗು ಸ್ಟಾರ್ ರಾಮ್ ಚರಣ್, ಚಿರಂಜೀವಿ ನಟಿಸುತ್ತಿರುವ ಆಚಾರ್ಯ ಚಿತ್ರದಲ್ಲಿ ಕಾಜಲ್ ನಟಿಸಿದ್ದಾರೆ.