ETV Bharat / sitara

ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಖ್ಯಾತ ಹಾಸ್ಯ ನಟ ಜಾನಿ ಲಿವರ್​ ಜನ್ಮದಿನ - ಮಿಮಿಕ್ರಿ ನಟ ಜಾನಿ ಲಿವರ್

ಜಾನಿ ಲಿವರ್ ಪ್ರಸಿದ್ಧ ಹಾಸ್ಯ ನಟ. ಇವರ ಮೊದಲ ಹೆಸರು ಜಾನ್ ಪ್ರಕಾಶ್​ ರಾವ್ ಜಾನುಮಾಲಾ. ಮಿಮಿಕ್ರಿ ಮೂಲಕ ನಗೆ ಹರಿಸುತ್ತಿರುವ ನಟನಿಗಿಂದು ಜನ್ಮ ದಿನ.

ಜಾನಿ ಲಿವರ್
ಜಾನಿ ಲಿವರ್
author img

By

Published : Aug 14, 2021, 10:01 AM IST

ಪ್ರೇಕ್ಷಕರ ಮೊಗದಲ್ಲಿ ನಗುವಿನ ಅಲೆ ಮೂಡಿಸುವ ಖ್ಯಾತ ಹಾಸ್ಯನಟ ಜಾನಿ ಲಿವರ್​ಗೆ ಇಂದು ಜನ್ಮ ದಿನ. 1954, ಆಗಸ್ಟ್ 14 ರಂದು ಆಂಧ್ರ ಪ್ರದೇಶದ ನಂದ್ಯಾಳದಲ್ಲಿ ಜನಿಸಿದ ಇವರು, ಇದೀಗ 64ನೇ ವಸಂತಕ್ಕೆ ಅಡಿ ಇಡುತ್ತಿದ್ದಾರೆ.

ದೇಶದಲ್ಲಿ ಸ್ಟಾಂಡ್ ಅಪ್ ಕಾಮಿಡಿಯ ಸಂಸ್ಕೃತಿ ಆರಂಭಿಸಿದವರಲ್ಲಿ ಇವರು ಕೂಡ ಒಬ್ಬರು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಲಿವುಡ್​ ಚಿತ್ರ ರಂಗದಲ್ಲಿ ತಮ್ಮದೇ ನಗುವಿನ ಅಲೆ ಹೊಮ್ಮಿಸಿರುವ ಜಾನಿ ಲಿವರ್, ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

ಬಡತನದಿಂದಾಗಿ 7ನೇ ಕ್ಲಾಸ್​ಗೆ ಶಾಲೆ ಬಿಟ್ಟು ಬೀದಿಗಳಲ್ಲಿ ಪೆನ್ನು ಮಾರುತ್ತಾ ಮಿಮಿಕ್ರಿ ಮಾಡಿ ಜನರನ್ನು ನಗಿಸುತ್ತಿದ್ದರು. ಬಳಿಕ ಕ್ರಮೇಣ ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮಗಳನ್ನು ಮಾಡುತ್ತಾ ಪ್ರಸಿದ್ಧರಾದರು. ಬಳಿಕ ಸಿನಿಮಾ ರಂಗಕ್ಕೆ ಪ್ರವೇಶಿಸಿ, ಅದ್ಭುತವಾಗಿ ನಟಿಸಿದರು. ಪರಿಣಾಮವಾಗಿ 13 ಫಿಲ್ಮ್​ ಫೇರ್ ಪ್ರಶಸ್ತಿಗಳು ಇವರನ್ನ ಹುಡುಕಿ ಬಂದಿವೆ.

2019 ರಲ್ಲಿ ತೆರೆಕಂಡ ಕನ್ನಡ ಚಿತ್ರ 'ಗರ' ದಲ್ಲಿ ಸಾಧುಕೋಕಿಲಾ ಜೊತೆ ಜಾನಿ ಲಿವರ್ ನಟಿಸುವ ಮೂಲಕ ಸ್ಯಾಂಡಲ್​ವುಡ್​ಗೂ ಪಾದಾರ್ಪಣೆ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.