ಮುಂಬೈ: ಬಾಲಿವುಡ್ ನಟ-ನಿರ್ಮಾಪಕ ಜಾನ್ ಅಬ್ರಹಾಂ ಮತ್ತು ಅವರ ಪತ್ನಿ ಪ್ರಿಯಾ ರುಂಚಾಲ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರೂ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕೋವಿಡ್ ಪಾಸಿಟಿವ್ ಬಂದಿದ್ದ ವ್ಯಕ್ತಿಯನ್ನು ಮೂರು ದಿನಗಳ ಹಿಂದೆ ಸಂಪರ್ಕಿಸಿದ್ದೆ. ಇದೀಗ ನನಗೂ ಹಾಗೂ ನನ್ನ ಪತ್ನಿಗೂ ಸೋಂಕು ತಗುಲಿದ್ದು, ಇಬ್ಬರೂ ಹೋಮ್ ಕ್ವಾರಂಟೈನ್ನಲ್ಲಿದ್ದೇವೆಂದು ಎಂದು ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದಾರೆ.
ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾದ ಸೌಮ್ಯ ಲಕ್ಷಣಗಳು ಕಂಡು ಬಂದಿವೆ. ಇಬ್ಬರೂ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದೆವು. ನೀವೆಲ್ಲರೂ ಸುರಕ್ಷಿತ ಹಾಗೂ ಆರೋಗ್ಯಯುತವಾಗಿರಿ. ಮಾಸ್ಕ್ ಧರಿಸಿ ಎಂದು ಅಭಿಮಾನಿಗಳಲ್ಲಿ ಜಾನ್ ಅಬ್ರಾಹಂ ಮನವಿ ಮಾಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕರೀನಾ ಕಪೂರ್, ನೋರಾ ಫತೇಹಿ, ಅರ್ಜುನ್ ಕಪೂರ್ಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು.
ಇದನ್ನೂ ಓದಿ: ಶಮಿತಾ ಶೆಟ್ಟಿ 'ಬಿಗ್ ಬಾಸ್ 15' ಟ್ರೋಫಿಗೆ ತುಂಬಾ ಹತ್ತಿರವಾಗಿದ್ದಾರೆ: ಆಕಾಂಕ್ಷಾ ಪುರಿ