ETV Bharat / sitara

ಶ್ರದ್ಧಾ ಶ್ರೀನಾಥ್ ಅಭಿನಯದ 'ಜೆರ್ಸಿ' ಹಿಂದಿಗೆ ರಿಮೇಕ್​... ನಾಯಕ, ನಾಯಕಿ ಯಾರು?

ಗೌತಮ್ ತಿನ್ನನೂರಿ ನಿರ್ದೇಶಿಸಿದ್ದ 'ಜೆರ್ಸಿ' ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ನಟಿಸುತ್ತಿದ್ದಾರೆ. ಶಾಹಿದ್​​​ಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಲಿದ್ದು, ನಾಳೆಯಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

author img

By

Published : Dec 12, 2019, 11:26 PM IST

Jersey
ಹಿಂದಿಗೆ ರೀಮೇಕ್ ಆಗುತ್ತಿದೆ 'ಜೆರ್ಸಿ'

'ಯುಟರ್ನ್' ಚಿತ್ರದಿಂದ ಕನ್ನಡದಲ್ಲಿ ಸಿನಿಜರ್ನಿ ಆರಂಭಿಸಿದ ಶ್ರದ್ಧಾ ಶ್ರೀನಾಥ್ ಕನ್ನಡದಿಂದ ಟಾಲಿವುಡ್, ಕಾಲಿವುಡ್ ನಂತರ ಬಾಲಿವುಡ್​​​ ಚಿತ್ರಗಳಲ್ಲಿ ಕೂಡಾ ನಟಿಸಿ ಅಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ತೆಲುಗಿನಲ್ಲಿ ಅವರು ನಾಣಿಯೊಂದಿಗೆ ಅಭಿನಯಿಸಿದ್ದ 'ಜೆರ್ಸಿ' ಸಿನಿಮಾಗೆ ತೆಲುಗು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Shraddha Srinath and Nani in Jersey
'ಜೆರ್ಸಿ' ಚಿತ್ರದಲ್ಲಿ ನಾಣಿ, ಶ್ರದ್ಧಾ ಶ್ರೀನಾಥ್​​

ಗೌತಮ್ ತಿನ್ನನೂರಿ ನಿರ್ದೇಶಿಸಿದ್ದ 'ಜೆರ್ಸಿ' ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್ ಸಂಗೀತ ನಿರ್ದೇಶಿಸಿದ್ದರು. ಇದೀಗ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಶಾಹಿದ್ ಕಪೂರ್ ಹಿಂದಿ ರೀಮೇಕ್​​​ನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಶಾಹಿದ್​​ಗೆ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಲಿದ್ದಾರೆ. ವಿಶೇಷ ಎಂದರೆ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದ ಗೌತಮ್​ ತಿನ್ನನೂರಿ ಅವರೇ ಹಿಂದಿಯಲ್ಲೂ ನಿರ್ದೇಶಿಸುತ್ತಿದ್ದಾರೆ. ಅಲ್ಲದೆ ದಿಲ್​​​ರಾಜು ಹಾಗೂ ಅಲ್ಲು ಅರವಿಂದ್​​​ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಕ್ರಿಕೆಟ್​ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾಗಾಗಿ ಈಗಾಗಲೇ ಶಾಹಿದ್​ ತಯಾರಿ ನಡೆಸಿದ್ದಾರೆ. ಪಾತ್ರಕ್ಕಾಗಿ ಹೆಚ್ಚಿನ ಕ್ರಿಕೆಟ್ ಅಭ್ಯಾಸ ಕೂಡಾ ಮಾಡುತ್ತಿದ್ದಾರಂತೆ ಶಾಹಿದ್.

  • Thank you all for all the concern and wishes. Last 2 weeks I was out of action but am well and raring to go now. #Jersey shoot starts tomorrow. As usual pre shoot nervousness. Sleepless and anxious. Every character is a new challenge. And the responsibility of finding truth.

    — Shahid Kapoor (@shahidkapoor) December 11, 2019 " class="align-text-top noRightClick twitterSection" data=" ">

ಇನ್ನು ಹಿಂದಿಯಲ್ಲಿ ಕೂಡಾ ಈ ಚಿತ್ರಕ್ಕೆ 'ಜೆರ್ಸಿ' ಎಂದು ಹೆಸರಿಟ್ಟಿದ್ದು, ನಾಳೆಯಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಈ ಬಗ್ಗೆ ತಮ್ಮ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿರುವ ಶಾಹಿದ್ ಕಪೂರ್​​, 'ಈ ಪಾತ್ರ ನಿಜಕ್ಕೂ ಚಾಲೆಂಜಿಂಗ್ ಆಗಿದೆ. ನಾಳೆಯಿಂದ ಶೂಟಿಂಗ್ ಆರಂಭವಾಗುತ್ತಿದೆ. ಆದರೆ ಭಯವಾಗುತ್ತಿದೆ, ಕಣ್ಣಿಗೆ ನಿದ್ರೆ ಹತ್ತುತ್ತಿಲ್ಲ, ಕಳೆದ ವಾರದಿಂದ ಅನಾರೋಗ್ಯ ಸಮಸ್ಯೆ ಕಾಡಿತ್ತು, ಶೀಘ್ರ ಗುಣಮುಖವಾಗಲೆಂದು ಹಾರೈಸಿದ ನಿಮ್ಮ ಪ್ರೀತಿಗೆ ಧನ್ಯವಾದಗಳು ' ಎಂದು ಶಾಹಿದ್ ಬರೆದುಕೊಂಡಿದ್ದಾರೆ. ಶಾಹಿದ್ ಅಭಿನಯದ 'ಅರ್ಜುನ್ ರೆಡ್ಡಿ ' ರಿಮೇಕ್ ಕೂಡ ಬಾಲಿವುಡ್​​​ನಲ್ಲಿ ಹೆಸರು ಮಾಡಿತ್ತು. ಇದೀಗ 'ಜೆರ್ಸಿ ' ಹಿಂದಿ ಪ್ರೇಕ್ಷಕರನ್ನು ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕು.

Intro:Body:

jersey remake

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.