ETV Bharat / sitara

ಬಣ್ಣದ ಜಗತ್ತಿನ 'ವಾರಿಯರ್' ಕಣ್ಮರೆ, ಚಿತ್ರಲೋಕದ 'ಚಾಣಕ್ಯ'ನ ಸಾವಿಗೆ ಮಿಡಿಯಿತು ಮನ - ಬಾಲಿವುಡ್ ನಟ ಇರ್ಫಾನ್​

ಹಿಂದಿ ಚಿತ್ರರಂಗದ ಪ್ರತಿಭಾವಂತ ನಟ ಇರ್ಫಾನ್​ ಖಾನ್​ ತಮ್ಮ 53ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಚಿತ್ರಲೋಕ ಕಂಬನಿ ಮಿಡಿದಿದೆ.

Irrfan Khan passes away
Irrfan Khan passes away
author img

By

Published : Apr 29, 2020, 1:18 PM IST

ಮುಂಬೈ: ಬಾಲಿವುಡ್​ನ ಮೇರು ನಟ ಇರ್ಫಾನ್​ ಖಾನ್​ ತಮ್ಮ 53ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದು, ಅವರ ಸಾವಿಗೆ ಚಿತ್ರರಂಗ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

  • My dear friend Irfaan. You fought and fought and fought. I will always be proud of you.. we shall meet again.. condolences to Sutapa and Babil.. you too fought, Sutapa you gave everything possible in this fight. Peace and Om shanti. Irfaan Khan salute.

    — Shoojit Sircar (@ShoojitSircar) April 29, 2020 " class="align-text-top noRightClick twitterSection" data=" ">

2018ರಲ್ಲೇ ಕ್ಯಾನ್ಸರ್​ ಕಾಯಿಲೆಗೆ ಒಳಗಾಗಿದ್ದ ಇವರು ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡು ಸ್ವದೇಶಕ್ಕೆ ವಾಪಸ್​ ಆಗಿದ್ದರು. ಅದಾದ ಬಳಿಕ ಸಾರ್ವಜನಿಕ ಜೀವನದಿಂದ ದೂರವೇ ಉಳಿದು ಸಿನಿಮಾಗಳಲ್ಲಿನ ನಟನೆಯನ್ನೂ ನಿಲ್ಲಿಸಿದ್ದರು. ಬಣ್ಣದ ಜಗತ್ತಿನ ಆರಂಭದಲ್ಲಿ ಚಾಣಕ್ಯ, ಬನೇಗಿ ಅಪ್ನಿ ಬಾತ್, ಭಾರತ್ ಏಕ್ ಕೋಜ್ ಮತ್ತು ಚಂದ್ರಕಾಂತ್ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಇವರು, ತದನಂತರ ಸಿನಿಮಾ ಕ್ಷೇತ್ರದತ್ತ ಮುಖ ಮಾಡಿದರು.

ವಾರಿಯರ್, ಮಕ್ಬೂಲ್, ಹಾಸಿಲ್, ಪಾನ್ ಸಿಂಗ್ ತೋಮರ್, ರೋಗ್, ಲೈಫ್ ಆಫ್ ಪೈ, ನೇಮ್ ಸೇಕ್, ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅಂಗ್ರೇಜಿ ಮೀಡಿಯಂ ಇವರು ನಟಿಸಿದ್ದ ಕೊನೆಯ ಸಿನಿಮಾ ಆಗಿತ್ತು.

Irrfan Khan passes away
ಇರ್ಫಾನ್​ ಖಾನ್ (ಸಂಗ್ರಹ ಚಿತ್ರ)

ಇರ್ಫಾನ್​ ಖಾನ್​​ ನಿಧನಕ್ಕೆ ಬಾಲಿವುಡ್​ನ ನಟರು, ಗಣ್ಯಾತಿಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಟ್ವಿಟರ್​ನಲ್ಲಿ #IrrfanKhan,#RestInPeace ಟಾಪ್​ ಟ್ರೆಂಡಿಂಗ್​​ನಲ್ಲಿದೆ.

ನೀವು ಇಲ್ಲ ಎಂಬುದನ್ನು ಎಂದಿಗೂ ಒಪ್ಪಿಕೊಳ್ಳಲ್ಲ: ತಾಪ್ಸಿ

  • When we thought nothing could make us feel worse,this happened. I think I will refuse to believe you are no more by watching all your work time n again n again n again. I have known you that way n shall continue to know you that way for ever. You ARE the best we have #IrrfanKhan

    — taapsee pannu (@taapsee) April 29, 2020 " class="align-text-top noRightClick twitterSection" data=" ">

ನೀವು ನಟಿಸಿರುವ ಚಿತ್ರಗಳನ್ನು ಮೇಲಿಂದ ಮೇಲೆ ನೋಡುತ್ತಿರುತ್ತೇನೆ. ನೀವಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ನೀವು ನಮ್ಮೊಂದಿಗಿದ್ದ ಒಂದೊಂದು ಕ್ಷಣ ಕೂಡ ಅದ್ಭುತ ಎಂದು ಅವರು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.