ETV Bharat / sitara

ಬಾಲಿವುಡ್​ ಬೋಲ್ಡ್​ ನಟಿ ತಾಪ್ಸಿ ಪನ್ನು ಆ ಜನ್ಮದಿನ ಹೇಗಿತ್ತು ಗೊತ್ತಾ.?

author img

By

Published : Apr 15, 2020, 6:36 PM IST

ನಟಿ ತಾಪ್ಸಿ ಪನ್ನು ತಮ್ಮ ಹುಟ್ಟುಹಬ್ಬ ಆಚರಣೆಯ ಕುರಿತಾದ ಫೋಟೋವೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Here's how Taapsee's birthday be like...
ನಟಿ ತಾಪ್ಸಿ ಪನ್ನು ಜನ್ಮದಿನ

ಬಾಲಿವುಡ್​ ನಟಿ ತಾಪ್ಸಿ ಪನ್ನು ಥ್ರೋಬ್ಯಾಕ್ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಹುಟ್ಟು ಹಬ್ಬದ ಆಚರಣೆಯ ಫೋಟೋ ಶೇರ್​ ಮಾಡಿದ್ದಾರೆ.

32 ವರ್ಷದ ಬೆಡಗಿ ತಾಪ್ಸಿ ಹಿಂದೆಂದೂ ನೋಡಿರದ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರ ಸೋದರ ಸಂಬಂಧಿಗಳು, ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಪಟದಲ್ಲಿದ್ದಾರೆ.

‘ನನಗೆ ಜನ್ಮದಿನದ ಶುಭಾಶಯಗಳು! ನನ್ನ ಹುಟ್ಟುಹಬ್ಬವನ್ನು ಹಳೆಯ ಶಾಲಾ ದಿನಗಳ ರೀತಿಯಲ್ಲಿ ಕುಟುಂಬದೊಂದಿಗೆ ಆಚರಿಸಲು ನಾನು ಸಾಮಾನ್ಯವಾಗಿ ಬಯಸುತ್ತೇನೆ.’ ಎಂದು ಶೀರ್ಷಿಕೆ ನೀಡಿದ್ದಾರೆ.

ಆ ವರ್ಷದ ನನ್ನ ಹುಟ್ಟು ಹಬ್ಬವನ್ನು ಮಕ್ಕಳಂತೆ ಆಚರಿಸಲು ನಾವು ನಿರ್ಧರಿಸಿದೆವು. ನನ್ನ ಎಲ್ಲಾ ಸೋದರ ಸಂಬಂಧಿಗಳು, ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಮನೆಗೆ ಬಂದಿದ್ದರು. ಮನೆಯಲ್ಲಿ ಭರ್ಜರಿ ಔತಣಕೂಟ ನಡೆಸುತ್ತಿದ್ದರು. ಹತ್ತಿರದ ರೆಸ್ಟೋರೆಂಟ್‌ಗೆ ಹೋಗಿ ಊಟ ಸವಿದೆವು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.