ETV Bharat / sitara

ಬಾಲಿವುಡ್​ 'ಪಿಂಕ್​' ಬ್ಯೂಟಿ ತಾಪ್ಸಿ ಪನ್ನುಗೆ ಹುಟ್ಟುಹಬ್ಬದ ಸಂಭ್ರಮ - ತಾಪ್ಸಿ ಪನ್ನು ಇತ್ತೀಚಿನ ಸುದ್ದಿ

ಬಾಲಿವುಡ್​ನ ಬಹು ಬೇಡಿಕೆಯ ನಟಿ ತಾಪ್ಸಿ ಪನ್ನುಗೆ ಇಂದು 34 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅಭಿಮಾನಿಗಳು ನೆಚ್ಚಿನ ನಟಿಗೆ ಶುಭಾಶಯ ಕೋರಿದ್ದಾರೆ.

Taapsee Pannu
ತಾಪ್ಸಿ ಪನ್ನು
author img

By

Published : Aug 1, 2021, 2:09 PM IST

ಹೈದರಾಬಾದ್: 'ಜುಮ್ಮಂದಿ ನಾದಂ' ಎಂಬ ತೆಲುಗು ಸಿನಿಮಾ ಮೂಲಕ ಚಿತ್ರ ಲೋಕದಲ್ಲಿ ಮಿಂಚಿದ ನಟಿ ತಾಪ್ಸಿ ಪನ್ನುಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34 ನೇ ವರ್ಷಕ್ಕೆ ಕಾಲಿಟ್ಟ ಈ ಬಾಲಿವುಡ್​ ಬೆಡಗಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ವಿಶ್​ ಮಾಡಿದ್ದಾರೆ.

ತಾಪ್ಸಿ ಬಾಲಿವುಡ್ ಹಾಗು ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯಾಗುವ ಮುನ್ನ ಈಕೆ ಸಾಫ್ಟ್​ವೇರ್ ಎಂಜಿನಿಯರ್​ ಆಗಿ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು. ಈಕೆ ನಟಿಸಿರುವ ತಮಿಳಿನ ಚಿತ್ರ 'ಆದುಕಲಂ', 58ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಆರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಮಲಯಾಳಂ ಚಲನಚಿತ್ರದಲ್ಲಿಯೂ ಇವರು ನಟಿಸಿದ್ದಾರೆ.

ಬಿಗ್​ಬಿ ಜೊತೆ ತಾಪ್ಸಿ
ಬಿಗ್​ಬಿ ಜೊತೆ ತಾಪ್ಸಿ

ತಮಿಳು ಚಲನಚಿತ್ರ ಆರಂಭಂ (2013) ಚಿತ್ರದಲ್ಲಿನ ಅಭಿನಯಕ್ಕಾಗಿ 2014ರ ಎಡಿಸನ್ ಪ್ರಶಸ್ತಿಯಲ್ಲಿ ಅವರಿಗೆ ಹೆಚ್ಚಿನ ಉತ್ಸಾಹಭರಿತ ಅಭಿನಯ-ಮಹಿಳಾ ಪ್ರಶಸ್ತಿಯನ್ನು ನೀಡಲಾಯಿತು. 2015ರಲ್ಲಿ ಅವರು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾದ ಬೇಬಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ಬಳಿಕ ಪಿಂಕ್ (2016), ದಿ ಗಾಝಿ ಅಟ್ಯಾಕ್ (2017), ಮತ್ತು ಜುಡ್ವಾ 2 (2017) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ರಿಷಿ ಕಪೂರ್​ ಜೊತೆ ತಾಪ್ಸಿ
ರಿಷಿ ಕಪೂರ್​ ಜೊತೆ ತಾಪ್ಸಿ

ಚಾನಲ್ ವಿ ಪ್ರತಿಭಾ ಪ್ರದರ್ಶನ 'ಗೆಟ್ ಗಾರ್ಜಿಯಸ್​'ಗೆ ಆಯ್ಕೆಯಾಗಿ ತಮ್ಮ ಮಾಡೆಲಿಂಗ್ ಜೀವನವನ್ನು ಆರಂಭಿಸಿದ ಇವರು, ಅನೇಕ ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. 2008 ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಪಾಂಟಲೂನ್ಸ್ ಫೆಮಿನಾ ಮಿಸ್ ಫ್ರೆಶ್ ಫೇಸ್ ಮತ್ತು ಸಫಿ ಫೆಮಿನಾ ಮಿಸ್ ಬ್ಯೂಟಿಫುಲ್ ಸ್ಕಿನ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಬಾಲಿವುಡ್​ನ ಬಹು ಬೇಡಿಕೆಯ ನಟಿ ತಾಪ್ಸಿ ಪನ್ನು
ಬಾಲಿವುಡ್​ನ ಬಹು ಬೇಡಿಕೆಯ ನಟಿ ತಾಪ್ಸಿ ಪನ್ನು

ರಿಲಯನ್ಸ್ ಟ್ರೆಂಡ್ಸ್, ರೆಡ್ ಎಫ್ಎಂ 93.5, ಯುನಿಸ್ಟೈಲ್ ಇಮೇಜ್, ಕೋಕಾ-ಕೋಲಾ, ಮೊಟೊರೊಲಾ, ಪಾಂಟಲೂನ್, ಪಿವಿಆರ್ ಸಿನಿಮಾಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಡಬೂರ್, ಏರ್ಟೆಲ್, ಟಾಟಾ ಡೊಕೊಮೊ, ವರ್ಲ್ಡ್ ಗೋಲ್ಡ್ ಕೌನ್ಸಿಲ್, ಹ್ಯಾವೆಲ್ಸ್ ಮತ್ತು ವಾರ್ಧಾನ್ ಮುಂತಾದ ಬ್ರಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ ಜಸ್ಟ್ ಫಾರ್ ವುಮೆನ್ ಮತ್ತು ಮಾಸ್ಟರ್ಸ್ ನಿಯತಕಾಲಿಕೆಗಳ ಮುಖಪುಟದಲ್ಲಿ ತಾಪ್ಸಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.