ETV Bharat / sitara

ತಾಪ್ಸಿ ಪನ್ನು ಅಭಿನಯದ ಹಸೀನ್ ದಿಲ್‌ರುಬಾ ಟೀಸರ್ ಔಟ್​..ಕುತೂಹಲ ಕೆರಳಿಸಿದ ಅಭಿನಯ - ತಾಪ್ಸಿ ಪನ್ನು ಹೊಸ ಸಿನಿಮಾ

ಬಾಲಿವುಡ್ ನಟಿ ತಾಪ್ಸಿ ಪನ್ನು ಅವರ ಬಹು ನಿರೀಕ್ಷಿತ ಚಿತ್ರ ಹಸೀನ್ ದಿಲ್‌ರುಬಾ ಸಿನಿಮಾದ ಟೀಸರ್ ಔಟ್​ ಆಗಿದೆ.

tapsi
tapsi
author img

By

Published : Jun 7, 2021, 7:31 PM IST

ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ಅವರ ಬಹು ನಿರೀಕ್ಷಿತ ಚಿತ್ರ ಹಸೀನ್ ದಿಲ್‌ರುಬಾ ಸಿನಿಮಾದ ಟೀಸರ್ ಔಟ್​ ಆಗಿದೆ.

ಇನ್ಸ್ಟಾಗ್ರಾಮ್​​ನಲ್ಲಿ ಟೀಸರ್ ಅನ್ನು ಹಂಚಿಕೊಂಡ ನೆಟ್​​​​ಫ್ಲಿಕ್ಸ್ ಇಂಡಿಯಾ,"ಪ್ಯಾರ್ ಕೆ ತೀನ್ ರಂಗ್, ಖೂನ್ ಕೆ ಚೀತೋ ಕೆ ಸಂಗ್​ # ಹಸೀನ್ ದಿಲ್‌ರುಬಾ #TheUltimateKaunspiracy." ಎಂದು ಬರೆದಿದೆ.

ಈ ಚಿತ್ರವು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ವಿಕ್ರಾಂತ್ ಮ್ಯಾಸಿ ಮತ್ತು ಹರ್ಷವರ್ಧನ್ ರಾಣೆ ನಟಿಸಿರುವ ಈ ಚಿತ್ರವು ಜುಲೈ 2 ರಿಂದ ಸ್ಟ್ರೀಮರ್‌ನಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ.

ನಿರ್ಮಾಪಕ ಆನಂದ್ ಎಲ್ ರೈ ಅವರು ಎರೋಸ್ ಇಂಟರ್​​ನ್ಯಾಷನಲ್ ಮತ್ತು ಹಿಮಾಂಶು ಶರ್ಮಾ ಅವರ ಸಹಯೋಗದೊಂದಿಗೆ ಕಲರ್ ಯೆಲ್ಲೋ ಪ್ರೊಡಕ್ಷನ್ ಎಂಬ ಬ್ಯಾನರ್ ಮೂಲಕ ಈ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ಕಳೆದ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರದ ಹಾಡುಗಳನ್ನು ಕೋವಿಡ್​​ ಕಾರಣಕ್ಕೆ ಮುಂದೂಡಲಾಗಿತ್ತು.

ಈ ಚಿತ್ರದಲ್ಲಿ ತಾಪ್ಸಿ ಜೊತೆಗೆ ವಿಕ್ಕಿ ಕೌಶಲ್ ಮತ್ತು ಅಭಿಷೇಕ್ ಬಚ್ಚನ್ ನಟಿಸಿದ್ದಾರೆ. ಹಸೀನ್ ದಿಲ್‌ರುಬಾ ಜೊತೆಗೆ ತಾಪ್ಸಿ ಭಾರತದ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಬಯೋಪಿಕ್ ನಲ್ಲಿಯೂ ಬಣ್ಣ ಹಚ್ಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.