ಲಖನೌ (ಉತ್ತರ ಪ್ರದೇಶ): ಬಾಲಿವುಡ್ನ ‘ಗುಲಾಬೋ ಸಿತಾಬೋ’ ಹಾಗೂ ‘ಸುಲ್ತಾನ್’ ಚಿತ್ರದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದ ಹಿರಿಯ ನಟಿ ಫಾರುಖ್ ಜಾಫರ್ ನಿಧನರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ 89 ವರ್ಷದ ಜಾಫರ್ ನಿನ್ನೆ ಸಂಜೆ ನಿಧರಾಗಿದ್ದಾರೆ ಎಂದು ಮಗಳು ಮೆಹರೂ ಜಾಫರ್ ತಿಳಿಸಿದ್ದಾರೆ.
ಉಸಿರಾಟ ಸಮಸ್ಯೆಯಿಂದಾಗಿ ಅ.4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಾಜಿ ಎಂಎಲ್ಸಿ ಎಸ್.ಎಂ ಜಾಫರ್ ಅವರ ಪತ್ನಿಯಾಗಿದ್ದು, ಬಾಲಿವುಡ್ನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
- " class="align-text-top noRightClick twitterSection" data="
">
1963ರಲ್ಲಿ ಆರಂಭವಾದ ವಿವಿಧ ಭಾರತಿ ರೇಡಿಯೋ ಕೇಂದ್ರದ ಮೊದಲ ವಾಚಕರಾಗಿದ್ದರು. ಬಳಿಕ 1981ರಲ್ಲಿ ಸಿನಿ ಜಗತ್ತಿಗೆ ಕಾಲಿರಿಸಿದ್ದರು. ಮೊದಲಿಗೆ ‘ಉಮರಾವ್ ಜಾನ್’ ಎಂಬ ಸಿನಿಮಾದಲ್ಲಿ ನಾಯಕಿಯ ತಾಯಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 2004ರ ಶಾರುಖ್ ಖಾನ್ ನಟನೆಯ ‘ಸ್ವದೇಶ್’ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಈ ನಡುವೆ ಹತ್ತು ಹಲವು ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು.
ಇದಾದ ಬಳಿಕ ಅಮಿರ್ ಖಾನ್ ನಟಿನೆಯ ‘ಪೀಪ್ಲಿ ಲೈವ್’ ಚಿತ್ರದಲ್ಲಿ ನಟಿಸಿ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದರು. ನಂತರ ಸಲ್ಮಾನ್ ಖಾನ್ ನಟನೆಯ ‘ಸುಲ್ತಾನ್’ ನಟನೆಯ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2019ರಲ್ಲಿ ತೆರೆಕಂಡ ನವಾಜುದ್ದೀನ್ ಸಿದ್ದಿಖಿ ನಟನೆಯ ‘ಫೋಟೋಗ್ರಾಫ್’ ಚಿತ್ರದಲ್ಲಿ ನಾಯಕನ ತಾಯಿ ಪಾತ್ರ ನಿರ್ವಹಿಸಿದ್ದರು.
ಓದಿ: ರಂಗಭೂಮಿಯಿಂದ ಸಿನಿಮಾಗೆ ಪದಾರ್ಪಣೆ ಮಾಡಿದ್ದ ಜಿ ಕೆ ಗೋವಿಂದರಾವ್.. ಅವರ ಬದುಕೇ 'ಕಥಾಸಂಗಮ'..