ETV Bharat / sitara

ನ್ಯೂಜಿಲ್ಯಾಂಡ್​​​ನಲ್ಲಿ ಮರುಬಿಡುಗಡೆಗೆ ಸಜ್ಜಾಗ್ತಿದೆ 'ಗೋಲ್​ಮಾಲ್​ ಎಗೇನ್​​​​​​'

ಹಾಸ್ಯ ಕಂತುಗಳ ಚಿತ್ರಗಳಲ್ಲಿ ಗೋಲ್​ಮಾಲ್​ ಸಿರೀಸ್​ ಚಿತ್ರವು ಹೆಚ್ಚಿನ ಜನಮನ್ನಣೆ ಗಳಿಸಿರುವ ಚಿತ್ರ. ಕೊರೊನ ಲಾಕ್​ಡೌನ್​ ಬಳಿಕ ನ್ಯೂಜಿಲ್ಯಾಂಡ್​ನಲ್ಲಿ ಇದು ಮರುಬಿಡುಗಡೆಗೆ ಸಜ್ಜಾಗಿದೆ. ಇದು ಮರುಪ್ರಾರಂಭವಾಗುವ ಮೊದಲ ಹಿಂದಿ ಚಿತ್ರವಾಗಿದೆ ಎಂದು ಚಿತ್ರ ನಿರ್ದೇಶಕ ರೋಹಿತ್​ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.

author img

By

Published : Jun 24, 2020, 12:34 PM IST

golmaal
ಗೋಲ್​ಮಾಲ್

ಮುಂಬೈ: ಗೋಲ್​ಮಾಲ್​ ಸಿರೀಸ್​ನ ಇತ್ತೀಚಿನ ಕಂತು ಗೋಲ್​ಮಾಲ್​ ಎಗೇನ್​ ಚಿತ್ರ ನ್ಯೂಜಿಲ್ಯಾಂಡ್​​​​​​​ನಲ್ಲಿ ಮರುಬಿಡುಗಡೆಗೆ ಸಜ್ಜಾಗಿದೆ ಎಂದು ಚಿತ್ರದ ನಿರ್ದೇಶಕ ರೋಹಿತ್​ ಶೆಟ್ಟಿ ತಿಳಿಸಿದ್ದಾರೆ.

ಇದು ದೇಶದಲ್ಲಿ ಕೋವಿಡ್​-19ನ ಲಾಕ್​ಡೌನ್​ ಬಳಿಕ ಚಿತ್ರಮಂದಿರಗಳಲ್ಲಿ ಮರು ಪ್ರಾರಂಭಿಸಿದ ಮೊದಲ ಹಿಂದಿ ಚಿತ್ರವಾಗಿದೆ.

ಗೋಲ್​ಮಾಲ್​ ಎಗೇನ್ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲು ನ್ಯೂಜಿಲ್ಯಾಂಡ್​ ನಿರ್ಧರಿಸಿದೆ, ಇದು ಕೋವಿಡ್​ ಲಾಕ್​ಡೌನ್​ ಬಳಿಕ ಚಿತ್ರಮಂದಿರ ಪ್ರಾರಂಭಿಸುವಲ್ಲಿ ತೆರೆ ಕಾಣುವ ಮೊದಲ ಚಿತ್ರವಾಗಿದೆ ಎಂದು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ಪೋಸ್ಟರ್​ನೊಂದಿಗೆ ಹಂಚಿಕೊಂಡಿದ್ದಾರೆ​

ನ್ಯೂಜಿಲ್ಯಾಂಡ್​​​​ ಈಗ ಕೋವಿಡ್ ಮುಕ್ತವಾಗಿದೆ, ಜೂನ್ 25 ರಂದು ಗೋಲ್​ಮಾಲ್​ ಎಗೇನ್​​​​ ಚಿತ್ರದೊಂದಿಗೆ ಮತ್ತೆ ಥಿಯೇಟರ್​ ತೆರೆಯುವ ಶುಭಾರಂಭಕ್ಕೆ ಸಜ್ಜಾಗಿದೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ 'ದಿ ಶೋ ಮಸ್ಟ್​ ಗೋ ಆನ್​' ಎಂಬ ಶೀರ್ಷಿಕೆ ನೀಡಿದ್ದಾರೆ.

ನ್ಯೂಜಿಲ್ಯಾಂಡ್​​​ನ ಆರೋಗ್ಯ ಸಚಿವಾಲಯವು ಈ ತಿಂಗಳ ಆರಂಭದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳು ವರದಿಯಾಗಿಲ್ಲ ಎಂದು ಘೋಷಿಸಿತ್ತು. ಆದರೆ, ಅದರ ನಂತರದಲ್ಲಿ ದೇಶದಲ್ಲಿ ಕೆಲವು ಪ್ರಕರಣಗಳು ವರದಿಯಾಗಿವೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.