ವಾಷಿಂಗ್ಟನ್: ಕೊರೊನಾ ವೈರಸ್ ಪರಿಣಾಮ 2021 ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭವನ್ನು ಮುಂದೂಡಲಾಗಿದೆ. ಆದರೆ 93ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೂ 8 ವಾರಗಳ ಮುನ್ನವೇ ಈ ಸಮಾರಂಭವನ್ನು ಏರ್ಪಡಿಸಲಾಗಿದೆ. ಫೆಬ್ರವರಿ 28 ರಂದು 78ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭ ಜರುಗಲಿದೆ.
-
We are excited to announce the 78th annual Golden Globe® Awards will take place on Sunday, February 28, 2021. The ceremony will air live coast to coast 5-8 p.m. PT/8-11 p.m. ET on NBC from The Beverly Hilton in Beverly Hills, California. pic.twitter.com/dtqQj3Mmtz
— Golden Globe Awards (@goldenglobes) June 22, 2020 " class="align-text-top noRightClick twitterSection" data="
">We are excited to announce the 78th annual Golden Globe® Awards will take place on Sunday, February 28, 2021. The ceremony will air live coast to coast 5-8 p.m. PT/8-11 p.m. ET on NBC from The Beverly Hilton in Beverly Hills, California. pic.twitter.com/dtqQj3Mmtz
— Golden Globe Awards (@goldenglobes) June 22, 2020We are excited to announce the 78th annual Golden Globe® Awards will take place on Sunday, February 28, 2021. The ceremony will air live coast to coast 5-8 p.m. PT/8-11 p.m. ET on NBC from The Beverly Hilton in Beverly Hills, California. pic.twitter.com/dtqQj3Mmtz
— Golden Globe Awards (@goldenglobes) June 22, 2020
ಈ ವಿಚಾರವನ್ನು ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಪ್ರಾಧಿಕಾರವು ತನ್ನ ಅಧಿಕೃತ ಟ್ವಿಟರ್ ಪೇಜ್ನಲ್ಲಿ ಪ್ರಕಟಿಸಿದೆ. ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ನಿನ್ನೆ ಬೆಳಗ್ಗೆ ಈ ಘೋಷಣೆ ಮಾಡಿದೆ. ಒಂದು ವಾರದ ಹಿಂದಷ್ಟೇ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅ್ಯಂಡ್ ಸೈನ್ಸ್ 93 ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವನ್ನು 2021 ಏಪ್ರಿಲ್ 25 ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಿತ್ತು. ದೇಶೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರ ಮತ್ತು ದೂರದರ್ಶನದಿಂದ ನಿರ್ಮಾಣವಾದ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಲವೇ ದಿನಗಳಲ್ಲಿ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಪ್ರಶಸ್ತಿ ಸಮಾರಂಭದ ಆಯೋಜಕರು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷದ ಆರಂಭದ ಮೊದಲ ಭಾನುವಾರ ಗ್ಲೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗಳು ಜರುಗುತ್ತವೆ. ಈ ಬಾರಿ ಅಂದರೆ 2020 ರಂದು ಕೂಡಾ ಜನವರಿ 5 ರಂದು ಗ್ಲೋಬಲ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗಿತ್ತು. ಆದರೆ ಮುಂದಿನ ವರ್ಷ ಈ ಸಮಾರಂಭ ನಡೆಯುವ ಸಮಯ ಬದಲಾಗಿದೆ. ಮುಂದಿನ ಬಾರಿ ಬೆವರ್ಲಿ ಹಿಲ್ಸ್ನ ಬೆವರ್ಲಿ ಹಿಲ್ಟನ್ನಿಂದ ಪ್ರಶಸ್ತಿ ಸಮಾರಂಭ ಪ್ರಸಾರವಾಗಲಿದೆ ಎನ್ನಲಾಗಿದೆ.