ಮುಂಬೈ: ಯುನೈಟೆಡ್ ಸ್ಟೇಟ್ಸ್ನಲ್ಲಿ ಸಮಾನ ಹಕ್ಕುಗಳಿಗಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನಾನು ಹಾಗೂ ಪತ್ನಿ ದೇಣಿಗೆ ನೀಡಿರುವುದಾಗಿ ತಿಳಿಸಿದ ಗಾಯಕ ನಿಕ್ ಜೊನಾಸ್, ವರ್ಣಭೇದ ನೀತಿ ಹಾಗೂ ಧರ್ಮಾಂಧತೆ ವಿರುದ್ಧ ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯ ಎಂದು ಹೇಳಿದ್ದಾರೆ.
'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಪ್ರತಿಭಟನೆಗಳು ಮುಂದುವರಿಯುತ್ತಿದ್ದಂತೆ, ಆಫ್ರಿಕನ್ - ಅಮೆರಿಕನ್ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಅವರ ನಿಧನಕ್ಕೆ ನಿಕ್ ಜೋನಸ್ ಹಾಗೂ ಪತ್ನಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಪ್ರಪಂಚದಾದ್ಯಂತ ಅಸಮಾನತೆ ಹೆಚ್ಚುತ್ತಿದೆ. ನಾವು ಮೌನವಾಗಿದ್ದರೆ ವರ್ಣಭೇದ ನೀತಿ ಮತ್ತು ಧರ್ಮಾಂಧತೆ ಅಧಿಕಗೊಳ್ಳಲಿದೆ ಎಂದು ನಿಕ್ ಬರೆದಿದ್ದಾರೆ. ಕ್ರಮ ಕೈಗೊಳ್ಳಲು ಇದು ಸೂಕ್ತ ಸಮಯ. ನಾವೆಲ್ಲರೂ ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಆ ಸಮುದಾಯದೊಂದಿಗೆ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ.
ಈಕ್ವಲ್ ಜಸ್ಟೀಸ್ ಇನಿಶಿಯೇಟಿವ್ ಮತ್ತು ಎಸಿಎಲ್ಯು (ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್) ಎಂಬ ಎರಡು ಸಂಸ್ಥೆಗಳಿಗೆ ದೇಣಿಗೆ ನೀಡಿರುವುದಾಗಿ ನಿಕ್ ಹೇಳಿದ್ದಾರೆ.